ಗುರುಸಾಯಿದತ್‌ಗೆ ಬಲ್ಗೇರಿಯ ಇಂಟರ್‌ನ್ಯಾಶನಲ್ ಟ್ರೋಫಿ
Update: 2017-10-08 23:58 IST
ಹೊಸದಿಲ್ಲಿ, ಅ.8: ಸುಮಾರು ಒಂದು ವರ್ಷದ ಬಳಿಕ ಅಂತಾ ರಾಷ್ಟ್ರೀಯ ಪಂದ್ಯವನ್ನು ಆಡಿರುವ ಭಾರತದ ಬ್ಯಾಡ್ಮಿಂಟನ್ ಆಟಗಾರ ಗುರುಸಾಯಿದತ್ ರವಿವಾರ ಬಲ್ಗೇರಿಯ ಇಂಟರ್‌ನ್ಯಾಶನಲ್ ಫ್ಯೂಚರ್ ಸಿರೀಸ್ ಟೂರ್ನಿಯನ್ನು ಜಯಿಸಿದ್ದಾರೆ.
ಗುರುಸಾಯಿದತ್ ಗಾಯದ ಸಮಸ್ಯೆಯಿಂದಾಗಿ 2016ರ ಜುಲೈನಿಂದ ಸಕ್ರಿಯ ಬ್ಯಾಡ್ಮಿಂಟನ್‌ನಿಂದ ದೂರವುಳಿದಿದ್ದರು. ರವಿವಾರ 35 ನಿಮಿಷಗಳ ಕಾಲ ನಡೆದಿದ್ದ ಫೈನಲ್ ಪಂದ್ಯದಲ್ಲಿ ಮುಹಮ್ಮದ್ ಅಲಿ ಅವರನ್ನು 21-17, 21-16 ಗೇಮ್‌ಗಳ ಅಂತರದಿಂದ ಮಣಿಸಿದರು. ಈ ಗೆಲುವು ಮುಂದಿನ ತಿಂಗಳು ನಡೆಯಲಿರುವ ಸೀನಿಯರ್ ನ್ಯಾಶನಲ್ಸ್ ಚಾಂಪಿಯನ್‌ಶಿಪ್‌ಗೆ ವಿಶ್ವಾಸವನ್ನು ಇಮ್ಮಡಿಗೊಳಿಸಿದೆ.