ತೆರೆದ ಸ್ಥಳದಲ್ಲಿ ತ್ಯಾಜ್ಯ ದಹನ : ಗ್ರಾ.ಪಂ.ಗೆ 25 ಸಾವಿರ ರೂ. ದಂಡ
ಪಣಜಿ, ಅ. 9: ತೆರೆದ ಸ್ಥಳದಲ್ಲಿ ತ್ಯಾಜ್ಯಗಳನ್ನು ದಹಿಸಿದ ಹಿನ್ನೆಲೆಯಲ್ಲಿ ಗೋವಾದ ಮಾಲಿನ್ಯ ನಿಯಂತ್ರಣ ಮಂಡಳಿ ಇಲ್ಲಿನ ಗ್ರಾಮಪಂಚಾಯತ್‌ಗೆ 25 ಸಾವಿರ ರೂ. ದಂಡ ವಿಧಿಸಿದೆ.
ಗೋವಾದ ಮಾಲಿನ್ಯ ನಿಯಂತ್ರಣ ಮಂಡಳಿ ರಾಜ್ಯದಲ್ಲಿ ಈ ರೀತಿ ದಂಡ ವಿಧಿಸುತ್ತಿರುವುದು ಇದೇ ಮೊದಲು.
ತ್ಯಾಜ್ಯಗಳನ್ನು ತೆರೆದ ಸ್ಥಳದಲ್ಲಿ ದಹಿಸಲಾಗುತ್ತಿದೆ ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ದೂರು ನೀಡಿದ ಹಿನ್ನೆಲೆಯಲ್ಲಿ ಪಣಜಿಯ ಹೊರವಲಯದಲ್ಲಿರುವ ಸಂತ ಕ್ರೂಜ್ ಗ್ರಾಮಪಂಚಾಯತ್‌ಗೆ ಮಾಲಿನ್ಯ ನಿಯಂತ್ರಣ ಮಂಡಳಿ ದಂಡ ವಿಧಿಸಿದೆ.
ದಂಡ ಶುಲ್ಕ ಸಂಗ್ರಹಿಸಲು ಮಂಡಳಿ ಉತ್ತರ ಗೋವಾದ ಜಿಲ್ಲಾಧಿಕಾರಿಗೆ ಸೂಚಿಸಿದೆ.
ರಾಷ್ಟ್ರೀಯ ಹಸಿರು ಮಂಡಳಿಯ ಆದೇಶದಲ್ಲಿ ತೆರೆದ ಸ್ಥಳಗಳಲ್ಲಿ ತ್ಯಾಜ್ಯ ಉರಿಸುವುದನ್ನು ನಿಷೇಧಿಸಲಾಗಿದೆ.
ತೆರೆದ ಸ್ಥಳದಲ್ಲಿ ತ್ಯಾಜ್ಯ ಉರಿಸಿದ ಹಿನ್ನೆಲೆಯಲ್ಲಿ ಗೋವಾ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಂತಾ ಕ್ರೂಜ್‌ನ ಗ್ರಾಮ ಪಂಚಾಯತ್‌ನ ಸ್ಪಷ್ಟೀಕರಣ ಕೇಳಿತ್ತು. ಆದರೆ, ಪ್ರತಿಕ್ರಿಯೆ ನೀಡಲು ಗ್ರಾಮಪಂಚಾಯತ್ ವಿಫಲವಾಗಿತ್ತು.