×
Ad

ವಿಶ್ವ ಯೂತ್ ಆರ್ಚರಿ: ಭಾರತಕ್ಕೆ ಚಿನ್ನ

Update: 2017-10-09 23:55 IST

ರೊಸಾರಿಯೊ, ಅ.9: ವಿಶ್ವ ಆರ್ಚರಿ ಯೂತ್ ಚಾಂಪಿಯನ್‌ಶಿಪ್‌ನ ಮಿಶ್ರ ಡಬಲ್ಸ್ ಜೋಡಿ ಜೆಮ್ಸನ್ ಹಾಗೂ ಅಂಕಿತಾ ಭಕ್ತ್ ರಿಕರ್ವ್ ಟೀಮ್ ವಿಭಾಗದಲ್ಲಿ ಚಿನ್ನ ಜಯಿಸಿದ್ದಾರೆ. ಈ ಮೂಲಕ ಭಾರತ ಟೂರ್ನಿಯಲ್ಲಿ ಮೂರು ಪದಕಗಳನ್ನು ಜಯಿಸಿದೆ. 2009 ಹಾಗೂ 2011ರಲ್ಲಿ ದೀಪಿಕಾ ಕುಮಾರಿ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಜಯಿಸಿದ ಬಳಿಕ ಭಾರತ ಇದೇ ಮೊದಲ ಬಾರಿ ಯೂತ್ ಚಾಂಪಿಯನ್‌ಶಿಪ್‌ನಲ್ಲಿ ಬಂಗಾರ ಗೆದ್ದುಕೊಂಡಿದೆ. ಭಾರತ ಟೂರ್ನಿಯಲ್ಲಿ ತಲಾ ಒಂದು ಬೆಳ್ಳಿ ಹಾಗೂ ಕಂಚು ಜಯಿಸಿದೆ. 9ನೆ ಶ್ರೇಯಾಂಕದ ಜೆಮ್ಸನ್ -ಭಕ್ತ್ ರವಿವಾರ ನಡೆದ ಫೈನಲ್‌ನಲ್ಲಿ ರಶ್ಯ ತಂಡವನ್ನು 6-2 ರಿಂದ ಮಣಿಸಿದರು. ಪುರುಷರ ಟೀಮ್ ಇವೆಂಟ್‌ನಲ್ಲಿ ಜೆಮ್ಸನ್ ಅವರು ಶುಕ್ಮನಿ ಗಜಾನನ್ ಹಾಗೂ ಅತುಲ್ ವರ್ಮ ಜೊತೆಗೂಡಿ ಬೆಳ್ಳಿ ಜಯಿಸಿದರು. ಕಾಂಪೌಂಡ್ ಕೆಡೆಟ್ ಮಹಿಳೆಯರ ಟೀಮ್ ವಿಭಾಗದಲ್ಲಿ ಖುಷ್ಬು ದಯಾಳ್, ಸಂಚಿತಾ ಹಾಗೂ ದಿವ್ಯಾ ಕಂಚು ಜಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News