ಪ್ರತಿ ವರ್ಷ ಸ್ವಿಝರ್ ಲ್ಯಾಂಡ್ ನ ಚರಂಡಿಗಳಲ್ಲಿ ಹಾದುಹೋಗುವ ಚಿನ್ನ ಎಷ್ಟು ಗೊತ್ತೇ?

Update: 2017-10-11 16:42 GMT

ವಿಜಯನಗರ ಕಾಲದ ವೈಭವವನ್ನು ಎಲ್ಲರೂ ಕೇಳಿದವರೇ, ವಿಜಯನಗರ ಸಾಮ್ರಾಜ್ಯದ ಆಡಳಿತ ಕಾಲದಲ್ಲಿ ಬೀದಿ ಬದಿಗಳಲ್ಲಿ ಚಿನ್ನ, ಮುತ್ತು ರತ್ನ, ಹವಳ, ವಜ್ರಗಳನ್ನು ಬೀದಿಬದಿಗಳಲ್ಲಿ ಮಾರಲಾಗುತ್ತಿತ್ತು, ಪ್ರಾಚೀನ ಭಾರತವು ಅತ್ಯಂತ ಶ್ರೀಮಂತವಾಗಿತ್ತು ಎನ್ನುವುದನ್ನು ನಾವು ಇತಿಹಾಸದಿಂದ ತಿಳಿದುಕೊಂಡಿದ್ದೇವೆ. ಆದರೆ ಸ್ವಿಝರ್ ಲ್ಯಾಂಡ್ ನ ಚರಂಡಿಗಳಲ್ಲಿ ಹಾದು ಹೋಗುತ್ತದೆ ಎನ್ನಲಾದ ಚಿನ್ನದ ಪ್ರಮಾಣವು ಒಂದು ಕ್ಷಣ ವಿಜನಯಗರ ಸಾಮ್ರಾಜ್ಯದ ವೈಭವವನ್ನು ನೆನಪಿಸುತ್ತದೆ.

ಏಕೆಂದರೆ ವರ್ಷವೊಂದಕ್ಕೆ ಸ್ವಿಝರ್ ಲ್ಯಾಂಡ್ ನ ಚರಂಡಿಗಳಲ್ಲಿ 11,72,88,180 ರೂ. ಮೌಲ್ಯದ 43 ಕೆ.ಜಿ. ಚಿನ್ನ ಹರಿದು ಹೋಗುತ್ತದಂತೆ..!. ಈ ವಿಚಾರವನ್ನು ಸ್ವಿಝರ್ ಲ್ಯಾಂಡ್ ನ ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ದೇಶದ ತ್ಯಾಜ್ಯ ಸಂಸ್ಕರಣಾ ಘಟಕಗಳಿಂದ ಹೊರಬರುವ ಕೆಸರಿನಿಂದಾಗಿ ಭಾರೀ ಪ್ರಮಾಣದ ಚಿನ್ನ ವ್ಯರ್ಥವಾಗುತ್ತಿದೆ ಎಂದು ಅಕ್ವಾಟಿಕ್ ಸೈನ್ಸ್ ಆ್ಯಂಡ್ ಟೆಕ್ನಾಲಜಿಯ ಸ್ವಿಸ್ ಫೆಡರಲ್ ಇನ್ ಸ್ಟಿಟ್ಯೂಟ್ ನ ವಿಜ್ಞಾನಿಗಳು ತಿಳಿಸಿದ್ದಾರೆ ಎಂದು ಬ್ಲೂಮ್ ಬರ್ಗ್ ವರದಿ ಮಾಡಿದೆ.

ತ್ಯಾಜ್ಯ ನೀರಿನಲ್ಲಿ ಕಂಡುಬರುವ ಈ ಅಂಶಗಳು ವಾತಾವರಣಕ್ಕೆ ತೊಂದರೆಯನ್ನುಂಟು ಮಾಡುವುದಿಲ್ಲ. ಇದರ ಮರುಪಡೆಯುವಿಕೆಯೂ ಉಪಯೋಗವಾಗುವುದಿಲ್ಲ. ಆದರೆ ಈ ಚಿನ್ನವನ್ನು ಮರಳಿ ಪಡೆಯಬಹುದಾದ ಸ್ಥಳಗಳನ್ನೂ ವಿಜ್ಞಾನಿಗಳು ಗುರುತಿಸಿದ್ದಾರೆ ಎನ್ನಲಾಗಿದೆ. ಇಷ್ಟೇ ಅಲ್ಲದೆ ಚರಂಡಿ ನೀರಿನಲ್ಲಿ ಸುಮಾರು 3000 ಕೆ.ಜಿ. ಬೆಳ್ಳಿ ಕೂಡ ಹರಿದುಹೋಗುತ್ತಿದೆ ಎಂದೂ ವಿಜ್ಞಾನಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News