×
Ad

ರಾಜಸ್ಥಾನ: ಶಿವಸೇನೆ ಬೆಂಬಲಿಗರಿಂದ ಯುವಕನಿಗೆ ಹಲ್ಲೆ

Update: 2017-10-13 22:31 IST

ಜೈಪುರ,ಅ.13: ಮಹಿಳೆಯೊಬ್ಬಳ ಜೊತೆ ಹೊಟೇಲ್‌ಗೆ ತೆರಳಿದ್ದ ಎನ್ನಲಾದ ಯುವಕನೊಬ್ಬನನ್ನು ಮಾರಣಾಂತಿಕವಾಗಿ ಥಳಿಸಿದ ಘಟನೆ ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಬಲೋತ್ರಾದಲ್ಲಿ ಗುರುವಾರ ನಡೆದಿದೆ

25 ವರ್ಷ ವಯಸ್ಸಿನ ಪದು ಖಾನ್ ಎಂಬಾತ, ಅನ್ಯಕೋಮಿನ ಮಹಿಳೆಯೊಬ್ಬರೊಂದಿಗೆ ಬೆಳಗ್ಗೆ ಸ್ಥಳೀಯ ಹೊಟೇಲೊಂದಕ್ಕೆ ಆಗಮಿಸಿದ್ದ ಎನ್ನಲಾಗಿದ್ದು. ಈ ಸಂದರ್ಭದಲ್ಲಿ ಶಿವಸೇನೆಯ ಕಾರ್ಯಕರ್ತರು ಎಂದು  ಗುರುತಿಸಲಾದ ತಂಡ ಹೊರಗೆ ಜಮಾಯಿಸಿ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದರು ಹಾಗೂ ಪದು ಖಾನ್‌ನನ್ನು ಹೊಟೇಲ್‌ನಿಂದ ಹೊರಗೆಳೆದು ಹಿಗ್ಗಾಮಗ್ಗಾ ಥಳಿಸಿದರೆಂದು ಹೊಟೇಲ್‌ನ ಮಾಲಕ ಮುಲ್ತಾನ್ ಪರಿಹಾರ್ ತಿಳಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡ ಖಾನ್‌ಗೆ ಬಾರ್ಬರ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಆನಂತರ ಜೋಧ್‌ಪುರದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆಯೆಂದು ಬಾರ್ಮರ್‌ನ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೈಲಾಶ್‌ಧನ್ ರತ್ನೂ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News