ಏಕದಿನ, ಟ್ವೆಂಟಿ-20 ಸರಣಿಗೆ ನ್ಯೂಝಿಲೆಂಡ್ ತಂಡ

Update: 2017-10-14 18:12 GMT

ಮುಂಬೈ, ಅ.14: ಭಾರತ ವಿರುದ್ಧ ಅ.22 ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಹಾಗೂ ಟ್ವೆಂಟಿ-20 ಸರಣಿಗೆ ಗ್ಲೆನ್ ಫಿಲಿಪ್ಸ್ ಹಾಗೂ ಟಾಡ್ ಅಸ್ಟ್ಲೇ ಸಹಿತ ಆರು ಆಟಗಾರರು ಕಿವೀಸ್ ಪಾಳಯಕ್ಕೆ ಸೇರ್ಪಡೆಗೊಂಡಿದ್ದಾರೆ. ಭಾರತ ‘ಎ’ ಹಾಗೂ ನ್ಯೂಝಿಲೆಂಡ್ ‘ಎ’ ನಡುವೆ ರವಿವಾರ ವಿಶಾಖಪಟ್ಟಣದಲ್ಲಿ ಸರಣಿ ಕೊನೆಗೊಂಡ ತಕ್ಷಣ ಫಿಲಿಪ್ಸ್, ಅಸ್ಟ್ಲೇ, ಮ್ಯಾಟ್ ಹೆನ್ರಿ, ಹೆನ್ರಿ ನಿಕೊಲ್ಸ್, ಕೊಲಿನ್ ಮುನ್ರೊ ಹಾಗೂ ಜಾರ್ಜ್ ವರ್ಕರ್ ಕಿವೀಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಸ್ಟಾರ್ ಬ್ಯಾಟ್ಸ್‌ಮನ್ ಕೇನ್ ವಿಲಿಯಮ್ಸನ್ ನ್ಯೂಝಿಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ. ನ್ಯೂಝಿಲೆಂಡ್ ಈ ಹಿಂದೆ ಏಕದಿನ ತಂಡಕ್ಕೆ ಕೇವಲ 9 ಸದಸ್ಯರುಗಳನ್ನು ಆಯ್ಕೆ ಮಾಡಿದ್ದು, ಭಾರತ ಪ್ರವಾಸದಲ್ಲಿರುವ ‘ಎ’ ತಂಡದ ಆಟಗಾರರ ಪ್ರದರ್ಶನವನ್ನು ಆಧರಿಸಿ ಉಳಿದ ಆಟಗಾರರನ್ನು ಆಯ್ಕೆ ಮಾಡಲು ನಿರ್ಧರಿಸಿತ್ತು. 9 ಸದಸ್ಯರನ್ನು ಒಳಗೊಂಡ ಕಿವೀಸ್ ತಂಡ ಶುಕ್ರವಾರ ಭಾರತಕ್ಕೆ ಆಗಮಿಸಿದ್ದು, ಏಕದಿನ ಸರಣಿ ಆರಂಭಕ್ಕೆ ಮೊದಲು ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ.

ನ್ಯೂಝಿಲೆಂಡ್ ಏಕದಿನ ತಂಡ: ಕೇನ್ ವಿಲಿಯಮ್ಸನ್(ನಾಯಕ), ಟಾಡ್ ಅಸ್ಟ್ಲೇ, ಟ್ರೆಂಟ್ ಬೌಲ್ಟ್, ಕೊಲಿನ್ ಡಿ ಗ್ರಾಂಡ್ ಹೊಮ್, ಮಾರ್ಟಿನ್ ಗಪ್ಟಿಲ್, ಮ್ಯಾಟ್ ಹೆನ್ರಿ, ಟಾಮ್ ಲಥಾಮ್, ಹೆನ್ರಿ ನಿಕೊಲ್ಸ್, ಆಡಮ್ ಮಿಲ್ನೆ, ಕಾಲಿನ್ ಮುನ್ರೊ, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ರಾಸ್ ಟೇಲರ್, ಜಾರ್ಜ್ ವರ್ಕರ್.

ಟ್ವೆಂಟಿ-20 ತಂಡ: ಕೇನ್ ವಿಲಿಯಮ್ಸನ್(ನಾಯಕ), ಟಾಡ್ ಅಸ್ಟ್ಲೇ, ಟ್ರೆಂಟ್ ಬೌಲ್ಟ್, ಟಾಮ್ ಬ್ರೂಸ್, ಕಾಲಿನ್ ಡಿ ಗ್ರಾಂಡ್‌ಹೊಮ್, ಮಾರ್ಟಿನ್ ಗಪ್ಟಿಲ್, ಮ್ಯಾಟ್ ಹೆನ್ರಿ, ಟಾಮ್ ಲಥಾಮ್, ಹೆನ್ರಿ ನಿಕೊಲ್ಸ್, ಆಡಮ್ ಮಿಲ್ನೆ, ಕಾಲಿನ್ ಮುನ್ರೊ, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಐಶ್ ಸೋಧಿ, ಟಿಮ್ ಸೌಥಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News