ಭಾರತದ ಜೂನಿಯರ್ ಹಾಕಿ ತಂಡ ಪ್ರಕಟ

Update: 2017-10-14 18:18 GMT

ಹೊಸದಿಲ್ಲಿ, ಅ.14: ಮಲೇಷ್ಯಾದಲ್ಲಿ ಅ.22 ರಿಂದ ಆರಂಭವಾಗಲಿರುವ ಏಳನೆ ಆವೃತ್ತಿಯ ಸುಲ್ತಾನ್ ಆಫ್ ಜೊಹೊರ್ ಕಪ್‌ಗೆ 18 ಸದಸ್ಯರನ್ನು ಒಳಗೊಂಡ ಪುರುಷರ ಜೂನಿಯರ್ ತಂಡವನ್ನು ಹಾಕಿ ಇಂಡಿಯಾ ಶನಿವಾರ ಪ್ರಕಟಿಸಿದೆ.

ತಂಡವನ್ನು ವಿವೇಕ್ ಸಾಗರ್ ಪ್ರಸಾದ್ ನಾಯಕನಾಗಿ ಮುನ್ನಡೆಸಲಿದ್ದಾರೆ. ಪ್ರತಾಪ್ ಲಾಕ್ರಾ ಉಪ ನಾಯಕನಾಗಿದ್ದಾರೆ. ಭಾರತ ಟೂರ್ನಮೆಂಟ್‌ನ ಮೊದಲ ಪಂದ್ಯದಲ್ಲಿ ಜಪಾನ್ ತಂಡವನ್ನು ಮುಖಾಮುಖಯಾಗಲಿದೆ. ಸೆ.11 ರಂದು ಲಕ್ನೋದ ಸಾಯ್ ಕೇಂದ್ರದ ನ್ಯಾಶನಲ್ ಕ್ಯಾಂಪ್‌ನಲ್ಲಿ ಭಾರತದ ಆಟಗಾರರು ತರಬೇತಿ ಪಡೆಯಲಿದ್ದಾರೆ.

2015ರಲ್ಲಿ ನಡೆದ ಐದನೆ ಆವೃತ್ತಿಯ ಸುಲ್ತಾನ್ ಆಫ್ ಜೊಹೊರ್ ಕಪ್ ಫೈನಲ್‌ನಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ ಶರಣಾಗಿರುವ ಭಾರತ ಒಂದು ವರ್ಷದ ಅಂತರದ ಬಳಿಕ ಪ್ರತಿಷ್ಠಿತ ಹಾಕಿ ಟೂರ್ನಿಯಲ್ಲಿ ಆಡುತ್ತಿದೆ.

ಟೂರ್ನಮೆಂಟ್‌ನಲ್ಲಿ ಭಾರತವಲ್ಲದೆ ಜಪಾನ್, ಆತಿಥೇಯ ಮಲೇಷ್ಯಾ, ಅಮೆರಿಕ, ಆಸ್ಟ್ರೇಲಿಯ ಹಾಗೂ ಗ್ರೇಟ್ ಬ್ರಿಟನ್ ತಂಡಗಳು ಭಾಗವಹಿಸಲಿವೆ.

ಭಾರತ ತಂಡ

ಗೋಲ್‌ಕೀಪರ್‌ಗಳು: ಪಂಕಜ್ ಕುಮಾರ್, ಸೆಂಥಾಮಿಝ್ ಅರಸು ಶಂಕರ್.

ಡಿಫೆಂಡರ್‌ಗಳು: ಸುಮನ್ ಬೆಕ್, ಪ್ರತಾಪ್ ಲಾಕ್ರಾ(ಉಪನಾಯಕ), ಸುಖ್‌ಜೀತ್ ಸಿಂಗ್, ವಿರೇಂದರ್ ಸಿಂಗ್, ಮನ್‌ದೀಪ್ ಮೊರ್, ಸಂಜಯ್.

ಮಿಡ್ ಫೀಲ್ಡರ್‌ಗಳು: ಹರ್ಮನ್‌ಜಿತ್ ಸಿಂಗ್, ರಬಿಚಂದ್ರ ಸಿಂಗ್, ವಿವೇಕ್ ಸಾಗರ್ ಪ್ರಸಾದ್(ನಾಯಕ), ವಿಶಾಲ್ ಸಿಂಗ್, ವಿಶಾಲ್ ಅಂಟಿಲ್.

ಫಾರ್ವರ್ಡ್‌ಗಳು: ಶೀಲಾನಂದ ಲಾಕ್ರ, ರೋಶನ್ ಕುಮಾರ್, ಅಭಿಷೇಕ್, ದಿಲ್‌ಪ್ರೀತ್ ಸಿಂಗ್, ಮಹಿಂದರ್ ಸಿಂಗ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News