ಕೊಲ್ಲರಕೋಡಿ ಶಾಲೆ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ

Update: 2017-10-25 11:40 GMT

ನರಿಂಗಾನ, ಅ.15: ಕೊಲ್ಲರಕೋಡಿ ಶಾಲೆ ಹಳೆ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳನ್ನು ಸಂಘದ ಸ್ಥಾಪಕ ಅಧ್ಯಕ್ಷ ಸಿದ್ದೀಕ್ ಪಾರೆಯವರ ಅಧ್ಯಕ್ಷತೆಯಲ್ಲಿ ರವಿವಾರ ಆಯ್ಕೆ ಮಾಡಲಾಯಿತು.

ಹಳೆ ವಿದ್ಯಾರ್ಥಿ ಸಂಘದ ಗೌರವ ಅಧ್ಯಕ್ಷರಾಗಿ ಸಿದ್ದೀಕ್ ಪಾರೆ ಅವರನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ನವಾಝ್, ಉಪಾಧ್ಯಕ್ಷರಾಗಿ ವಿವೇಕಾನಂದ ರೈ, ಗುರು ಪ್ರಾಸಾದ್ ಶೆಟ್ಟಿ ಮತ್ತು ಲತಾ ಬಿ  ಅವರನ್ನು  ನೇಮಿಸಲಾಯಿತು.

ಸಂಘದ ಗೌರವ ಸಲಹೆಗಾರರಾಗಿ ಪ್ರೇಮಾನಂದ ರೈ, ಸೀತಾರಾಮ್ ಶೆಟ್ಟಿ, ಲಕ್ಷ್ಮೀನಾರಾಯಣ ಹೊಳ್ಳ, ರೋಮ್ರ್ಕ್ ಡಿ’ಸೋಜ ಮತ್ತು ಆಲಿಕುಂಞಿ ಪಾರೆ ಅವರನ್ನು  ಆಯ್ಕೆ ಮಾಡಲಾಯಿತು.

ಪ್ರಧಾನ ಕಾರ್ಯದರ್ಶಿಯಾಗಿ ಚೇತನ್ ಶೆಟ್ಟಿ. ಜೊತೆ ಕಾರ್ಯದರ್ಶಿಗಳಾಗಿ ಆಸಿಫ್ ಪಲ್ಲ, ರಚಿತ, ಹರ್ಷಿತ, ಪ್ರಶಾಂತ್ ಮರಿಕಾಪು, ಕೋಶಾಧಿಕಾರಿಯಾಗಿ ವಿಜಯಾನಂದ ರೈ ಅವರನ್ನು  ಆಯ್ಕೆಮಾಡಲಾಯಿತು

ಪ್ರಧಾನ ಸಂಘಟನಾ ಕಾರ್ಯದರ್ಶಿಯಾಗಿ ಅಶ್ರಫ್ ಎಸ್. ಎಚ್. ಜೊತೆ ಸಂಘಟನಾ ಕಾರ್ಯದರ್ಶಿಯಾಗಿ ಸೂರಜ್, ರಿಯಾಝ್ ಪಲ್ಲ, ಚಂದ್ರಹಾಸ್ ಬೋಳ ಪದವು, ಪ್ರಮೀಳ ಅವರನ್ನು  ಈ ಸಂದರ್ಭ ಆಯ್ಕೆ ಮಾಡಲಾಯಿತು. ಸಂಘದ ಮಾಧ್ಯಮ ಕಾರ್ಯದರ್ಶಿಯಾಗಿ ನೌಫಲ್ ಎಚ್, ಸುಶಾಂತ್, ಸುಚಿತ ಅವರನ್ನು  ಆಯ್ಕೆಮಾಡಲಾಯಿತು.

ಕೊಲ್ಲರ ಕೋಡಿ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮವನ್ನು ದಿನಾಂಕ 22-10-2017ರಂದು ರವಿವಾರ ಬೆಳಗ್ಗೆ  9 ಗಂಟೆಗೆ ನಡೆಸಲಾಗುವುದೆಂದು ಸಭೆಯಲ್ಲಿ ತಿರ್ಮಾನಿಸಲಾಯಿತು.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News