ಕಂಡ್ಲೂರು: ಅಕ್ರಮ ಸಾಗಾಟದ 25 ಜಾನುವಾರು ಪೊಲೀಸ್ ವಶ

Update: 2017-10-17 04:17 GMT

ಕುಂದಾಪುರ, ಅ.17: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಪತ್ತೆ ಹಚ್ಚಿರುವ ಕಂಡ್ಲೂರು ಪೊಲೀಸರು 25 ಜಾನುವಾರುಗಳನ್ನು ವಶಪಡಿಸಿಕೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ.

ಇದೇ ವೇಳೆ ಜಾನುವಾರು ಸಾಗಾಟದ ವಾಹನವನ್ನು ತಡೆಯಲೆತ್ನಿಸಿದ ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಗ್ಗೆ ಕಂಡ್ಲೂರಿನಲ್ಲಿ ಪಿಕಪ್‌ನಲ್ಲಿ 25 ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತೆನ್ನಲಾಗಿದೆ. ಈ ವೇಳೆ ಪಿಕಪ್ ಅನ್ನು ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ ಪ್ರಶಾಂತ್ ನಾಗಣ್ಣ ಹಾಗೂ ಅಶೋಕ್ ಗಾಯಗೊಂಡಿದ್ದಾರೆ. ಬಳಿಕ ಪಿಕಪ್ ಅನ್ನು ಬೆನ್ನಟ್ಟಿದ ಪೊಲೀಸರು ಗುಲ್ವಾಡಿಯ ಸೇತುವೆ ಬಳಿ ವಶಕ್ಕೆ ಪಡೆದಿದ್ದಾರೆ. ಈ ವೇಳೆ ಆರೋಪಿಗಳು ಪರಾರಿಯಾಗಿದ್ದಾರೆ.

ಪಿಕಪ್‌ನಲ್ಲಿದ್ದ 25 ಜಾನುವಾರುಗಳ ಪೈಕಿ 10 ಹಸುನೀಗಿದ್ದವೆನ್ನಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕುಂದಾಪುರ ಗ್ರಾಮಾಂತರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News