ಇದು ಕೇರಳಿಗರಿಗೆ ಮಾಡಿದ ಅವಮಾನವಲ್ಲವೇ?

Update: 2017-10-17 18:40 GMT

ಮಾನ್ಯರೆ,

ಕಾಂಗ್ರೆಸ್ ಪಕ್ಷದ ಕರ್ನಾಟಕ ಉಸ್ತುವಾರಿ ವಹಿಸಿಕೊಂಡ ಕೆ.ಸಿ.ವೇಣುಗೋಪಾಲ್‌ರವರು ಕರ್ನಾಟಕಕ್ಕೆ ಬರಬಾರದೆಂದು ಶೋಭಾ ಕರಂದ್ಲಾಜೆಯವರು ತಾಕೀತು ಮಾಡಿದ್ದಾರೆ. ಈ ಹಕ್ಕು ಶೋಭಾರಿಗೆ ಇದೆಯೇ?. ಅವರನ್ನು ವಾಪಸು ಕರೆದುಕೊಳ್ಳುವವರೆಗೆ ಹೋರಾಟ ನಡೆಸುತ್ತೇವೆ ಎಂದಿರುವ ಬಿಜೆಪಿಯು ಕೆ.ಸಿ.ವೇಣುಗೋಪಾಲ್‌ರಿಗೆ ಹೆದರಿದೆಯೇ?. ಕೆ.ಸಿ.ವೇಣುಗೋಪಾಲ್‌ರ ಬಗ್ಗೆ ತನಿಖೆಯಾಗಿ ಅವರು ತಪ್ಪಿತಸ್ಥರಲ್ಲ ಎಂದು ತೀರ್ಪು ಬಂದಿರುತ್ತದೆ. ಈಗ ಮತ್ತೆ ಹಳೆಯ ವಿಚಾರವನ್ನು ಎತ್ತುವುದರಲ್ಲಿ ಷಡ್ಯಂತ್ರವಿದೆಯಲ್ಲವೇ?. ಅಲ್ಲದೆ ಶೋಭಾ ಕರಂದ್ಲಾಜೆಯವರು ‘‘ಕೆ.ಸಿ.ವೇಣುಗೋಪಾಲ್‌ರವರ ಕೇರಳದ ಬುದ್ಧಿ ಇಲ್ಲಿ ನಡೆಯುವುದಿಲ್ಲ’’ ಎಂದಿದ್ದಾರೆ. ಏನಿದರ ಅರ್ಥ?. ಭಾರತದಲ್ಲಿ ಎಲ್ಲಿ ಬೇಕಾದರೂ ಯಾವ ರಾಜ್ಯದವರಿಗೂ ಬದುಕುವ ಹಕ್ಕಿದೆ. ಮೇಲಿನ ಮಾತಿನಿಂದಾಗಿ ಶೋಭಾರವರು ಇಡೀ ಕೇರಳದ ಜನತೆಗೆ ಅವಮಾನ ಮಾಡಿದಂತಾಗಲಿಲ್ಲವೇ?.
ಕಷ್ಟಸಹಿಷ್ಣುಗಳಾಗಿರುವ ಕೇರಳಿಗರು ಸ್ವಾಭಿಮಾನಿಗಳು. ಇವರನ್ನು ಅವಮಾನಿಸುವ ಮುಖಾಂತರ ಶೋಭಾರ ನಿಜ ಬಣ್ಣ ಬಯಲಾಗಿದೆ. ಶೋಭಾರವರು ನಾಲಿಗೆಗೆ ಸ್ವಯಂ ಕಡಿವಾಣ ಹಾಕಿಕೊಂಡರೆ ಒಳ್ಳೆಯದು. ಇಲ್ಲದಿದ್ದರೆ ಕೇರಳಿಗರು ಇವರಿಗೆ ಸರಿಯಾದ ಪಾಠ ಕಲಿಸಲಿದ್ದಾರೆ.

     

Similar News