ಕಿನ್ಯ-ಬೋಳಿಯಾರ್ ಸರಕಾರಿ ಬಸ್ ಸಂಚಾರಕ್ಕೆ ಹೈಕೋರ್ಟ್ ತಡೆ

Update: 2017-10-18 16:18 GMT

ಮಂಗಳೂರು, ಅ.18: ತಾಲೂಕಿನ ಕಿನ್ಯ ಮತ್ತು ಬೋಳಿಯಾರ್ ಗೆ ಸರಕಾರಿ ಬಸ್ ಸಂಚಾರಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದ್ದು, ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವ ಯು.ಟಿ.ಖಾದರ್ ಅ.19ರಂದು ಸಂಜೆ 6:30ಕ್ಕೆ ಡಿಸಿ ಕಚೇರಿಯಲ್ಲಿ ವಿಶೇಷ ಸಭೆ ಕರೆದಿದ್ದಾರೆ. ಸಾರ್ವಜನಿಕರ ವಿಶೇಷ ಕೋರಿಕೆಯ ಮೇರೆಗೆ ಬೋಳಿಯಾರ್ ಗೆ 2 ಮತ್ತು ಕಿನ್ಯಕ್ಕೆ 1 ಸರಕಾರಿ ಬಸ್ ಚಲಿಸುತ್ತಿತ್ತು. ಇದರ ವಿರುದ್ಧ ಖಾಸಗಿ ಬಸ್ ಮಾಲಕರು ಹೈಕೋರ್ಟ್ ಮೆಟ್ಟಲೇರಿದ್ದರು. ಹೈಕೋರ್ಟ್ ಬಸ್ ಸಂಚಾರಕ್ಕೆ ತಡೆ ನೀಡಿತ್ತು. ಅದರಂತೆ ಬುಧವಾರದಿಂದ ಈ ರೂಟ್ ನ 3 ಬಸ್ ಗಳು ಓಡಾಟ ಸ್ಥಗಿತಗೊಳಿಸಿತ್ತು.

ಈ ಬಗ್ಗೆ 'ವಾರ್ತಾಭಾರತಿ'ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಖಾದರ್ ಬಸ್ ಮಾಲಕರ ನಡೆ ಖಂಡನೀಯ. ಗುರುವಾರ ನಡೆಸುವ ಸಭೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಸಾರ್ವಜನಿಕರು ಆತಂತಗೊಳ್ಳಬೇಕಿಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News