ಬಿಜೈನಲ್ಲಿ ಲಾಂಡ್ರಿ ಅಂಗಡಿಗೆ ಬೆಂಕಿ: ಹೊತ್ತಿ ಉರಿದ ದುಬಾರಿ ಮೌಲ್ಯದ ಸೀರೆಗಳು

Update: 2017-10-19 16:10 GMT

ಮಂಗಳೂರು, ಅ. 19: ಬಿಜೈನಲ್ಲಿ ಲಾಂಡ್ರಿ ಅಂಗಡಿಯೊಂದಕ್ಕೆ ಬೆಂಕಿ ಬಿದ್ದಿದ್ದು, ಅಪಾರ ಹಾನಿ ಸಂಭವಿಸಿರುವುದಾಗಿ ತಿಳಿದುಬಂದಿದೆ.

ಇಲ್ಲಿನ ರೆನ್ವಿಕ್ ಎಂಬವರ ಮೈ ಆಂಗರ್ ಲಾಂಡ್ರಿಗೆ ಬೆಂಕಿ ಹೊತ್ತಿಕೊಂಡಿದೆ. ಆಧುನಿಕ ತಂತ್ರಜ್ಞಾನವಿರುವ ಲಾಂಡ್ರಿಯಲ್ಲಿ ದುಬಾರಿ ಮೌಲ್ಯದ ಸೀರೆಗಳು ಸೇರಿದಂತೆ ಇತರ ಸೊತ್ತುಗಳು ಬೆಂಕಿಗಾಹುತಿಯಾಗಿದ್ದು, ಇದರಿಂದ ಸುಮಾರು ಒಂದು ಲಕ್ಷ ರೂ. ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.

ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಮಾಹಿತಿ ಅರಿತ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News