ಎಸ್ಐಒ ಸಂಸ್ಥಾಪನಾ ದಿನ: ಉಳ್ಳಾಲ ಶಾಖೆಯಿಂದ ಧ್ವಜಾರೋಹಣ ಕಾರ್ಯಕ್ರಮ

Update: 2017-10-19 08:39 GMT

ಉಳ್ಳಾಲ,  ಅ. 19: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ ಇದರ  ಸಂಸ್ಥಾಪನಾ ದಿನದ ಅಂಗವಾಗಿ ಎಸ್ಐಒ ಉಳ್ಳಾಲ ಶಾಖೆಯ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮವನ್ನು ಇಂದು ಸುಮಯ್ಯಾ ಮಸೀದಿ ಹಿರಾ ನಗರ ಬಬ್ಬುಕಟ್ಟೆಯಲ್ಲಿ ಬೆಳಗ್ಗೆ ನೆರೆವೇರಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ಜಮಾಅತೇ ಇಸ್ಲಾಮಿ ವಲಯ ಕಾರ್ಯದರ್ಶಿ ಇಲ್ಯಾಸ್ ಇಸ್ಮಾಯಿಲ್ ಧ್ವಜಾರೋಹಣ ಮಾಡಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಯುವಕರು ಸಮಾಜದ ಪುನರ್ನಿಮಾಣದ ಕಾರ್ಯದಲ್ಲಿರಬೇಕು, ಯವ್ವನವನ್ನು ಹಾಳು ಮಾಡಬಾರದು ಉತ್ತಮ ಸಮಾಜದ ವಕ್ತಾರರಾಗಬೇಕು ಎಂದರು.

ಇನ್ನೋರ್ವ ಮುಖ್ಯ ಅತಿಥಿ ಎಸ್ಐಒ ಉಳ್ಳಾಲ ಶಾಖೆಯ ಸ್ಥಾಪಕ ಅಧ್ಯಕ್ಷರೂ, ಸ್ಥಾನೀಯ ಜಮಾಅತ್ ಅಧ್ಯಕ್ಷ ಅಬ್ದುಲ್ ಕರೀಂ ಅವರು ಮಾತನಾಡುತ್ತಾ ಎಸ್ಐಒ ಧಾರ್ಮಿಕ ಜ್ಞಾನದೊಂದಿಗೆ ಸಾಮಾಜಿಕ ಕಳಕಳಿಯನ್ನುಂಟು ಮಾಡುವ ಸಂಘಟನೆ ಇಂದು ದೇಶಾದ್ಯಂತ ಬೆಳೆದು 35 ವರ್ಷಗಳು ದಾಟಿವೆ ಇನ್ನೂ ಬೆಳೆಯಬೇಕು ಸಮಾಜದಲ್ಲಿ ಶಾಂತಿ ಸೌಹಾರ್ದತೆಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದರು.

ಜಮಾಅತೇ ಇಸ್ಲಾಮಿ ವಲಯ ಕಾರ್ಯದರ್ಶಿ, ಸಮಾಜ ಸೇವಾ ಘಟಕದ ಅಧ್ಯಕ್ಷ ಸಿ ಎಚ್ ಸಲಾಂ ಮಾತನಾಡಿದರು. ಎಸ್ ಐ ಒ ಉಳ್ಳಾಲ ಶಾಖೆಯ ಅಧ್ಯಕ್ಷ ಅಶೀರುದ್ದೀನ್ ಆಲಿಯಾ ಸ್ವಾಗತಿಸಿ, ಪ್ರಾಸ್ತಾವಿಕ ನುಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಝಾಮ್ ಎಸ್ಐಒ ಘೋಷಣಾ ವಾಖ್ಯ ಹೇಳಿದರು. ಸೈಫ್ ಕಿರಾಅತ್ ಪಠಿಸಿದರು. ಅನಿವಾಸಿ ಹುಸೇನ್ ಹಾಗೂ ಇತರರು ಉಪಸ್ಥಿತರಿದ್ದರು. ತಾಜುದ್ದೀನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News