ಭ್ರಷ್ಟಾಚಾರ: ಶರೀಫ್, ಮರ್ಯಮ್ ವಿರುದ್ಧ ದೋಷಾರೋಪಣೆ

Update: 2017-10-19 14:42 GMT

ಇಸ್ಲಾಮಾಬಾದ್, ಅ. 19: ಲಂಡನ್‌ನಲ್ಲಿರುವ ಆಸ್ತಿಗಳ ಮಾಲಕತ್ವಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಝ್ ಶರೀಫ್ ಮತ್ತು ಅವರ ಮಗಳ ವಿರುದ್ಧ ಇಲ್ಲಿನ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯವೊಂದು ಗುರುವಾರ ದೋಷಾರೋಪ ಹೊರಿಸಿದೆ.

ತಮ್ಮ ವಿರುದ್ಧ ದಾಖಲಿಸಲಾದ ಭ್ರಷ್ಟಾಚಾರ ಮೊಕದ್ದಮೆಗಳು ಪಿತೂರಿಯಾಗಿವೆ ಎಂಬುದಾಗಿ ಶರೀಫ್ ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ದೇಶದ ಪ್ರಬಲ ಸೇನೆ ಇದರ ಹಿಂದಿದೆ ಎಂದು ಅವರು ಆರೋಪಿಸಿದ್ದಾರೆ.

ಆದರೆ, ಪ್ರತಿಪಕ್ಷಗಳು ಈ ತೀರ್ಪನ್ನು ಸ್ವಾಗತಿಸಿದ್ದು, ಶ್ರೀಮಂತ ಮತ್ತು ಪ್ರಭಾವಿಗಳನ್ನು ಉತ್ತರದಾಯಿಗಳನ್ನಾಗಿಸಿದ ಅಪರೂಪದ ಪ್ರಕರಣ ಇದಾಗಿದೆ ಎಂದಿವೆ.

ಅಘೋಷಿತ ಆದಾಯ ಮೂಲವೊಂದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಜುಲೈಯಲ್ಲಿ 67 ವರ್ಷದ ಶರೀಫ್‌ರನ್ನು ಪ್ರಧಾನಿ ಹುದ್ದೆಯಿಂದ ಅನರ್ಹಗೊಳಿಸಿತ್ತು. ಆದರೆ, ಶರೀಫ್ ಆಡಳಿತಾರೂಢ ಪಾಕಿಸ್ತಾನ್ ಮುಸ್ಲಿಮ್ ಲೀಗ್-ನವಾಝ್ (ಪಿಎಂಎಲ್-ಎನ್) ಮೇಲೆ ಬಿಗಿ ಹಿಡಿತವನ್ನು ಹೊಂದಿದ್ದಾರೆ.

ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯವು ಶರೀಫ್, ಅವರ ಮಗಳು ಮರ್ಯಮ್ ಮತ್ತು ಆಕೆಯ ಗಂಡ ಮುಹಮ್ಮದ್ ಸಫ್ದರ್‌ರನ್ನು ದೋಷಾರೋಪಣೆಗೆ ಗುರಿಪಡಿಸಿತು ಎಂದು ‘ರಾಯ್ಟರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಶರೀಫ್ ಮತ್ತು ಸಫ್ದರ್ ನ್ಯಾಯಾಲಯದಲ್ಲಿ ಉಪಸ್ಥಿತರಿದ್ದರು. ಬ್ರಿಟನ್‌ನಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿರುವ ತನ್ನ ಪತ್ನಿಯ ಆರೈಕೆಯಲ್ಲಿ ತೊಡಗಿರುವ ಶರೀಫ್ ತನ್ನ ಪ್ರತಿನಿಧಿಯನ್ನು ಕಳುಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News