×
Ad

ಕ್ಯಾಟಲೋನಿಯದ ಸ್ವಾಯತ್ತೆ ರದ್ದಿಗೆ ಮುಂದಾದ ಸ್ಪೇನ್ ಸರಕಾರ

Update: 2017-10-19 19:57 IST

 ಮ್ಯಾಡ್ರಿಡ್ (ಸ್ಪೇನ್), ಅ. 19: ಕ್ಯಾಟಲೋನಿಯಕ್ಕೆ ನೀಡಲಾಗಿರುವ ಸ್ವಾಯತ್ತೆಯನ್ನು ಅಮಾನತಿನಲ್ಲಿಡಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಸ್ಪೇನ್ ಸರಕಾರ ಗುರುವಾರ ಹೇಳಿದೆ. ಸ್ಪೇನ್ ತನ್ನ ‘ದಮನ’ವನ್ನು ಮುಂದುವರಿಸಿದರೆ ಸ್ಪೇನ್‌ನಿಂದ ಸ್ವತಂತ್ರಗೊಳ್ಳುವ ಘೋಷಣೆಯನ್ನು ಮಾಡುವುದಾಗಿ ಕ್ಯಾಟಲೋನಿಯದ ಪ್ರತ್ಯೇಕತಾವಾದಿ ನಾಯಕ ಬೆದರಿಕೆ ಹಾಕಿದ ಬಳಿಕ ಈ ಬೆಳವಣಿಗೆ ನಡೆದಿದೆ.

 ‘‘ಕ್ಯಾಟಲೋನಿಯದ ಸ್ವಯಂ ಸರಕಾರದ ಕಾನೂನುಬದ್ಧತೆಯನ್ನು ಮರಳಿ ತರುವುದಕ್ಕಾಗಿ ಸಂವಿಧಾನದ 155ನೆ ವಿಧಿಯಲ್ಲಿ ಉಲ್ಲೇಖಿಸಲ್ಪಟ್ಟಿರುವ ವಿಧಾನಗಳನ್ನು ಸ್ಪೇನ್ ಸರಕಾರ ಅನುಸರಿಸಲಿದೆ’’ ಎಂದು ಅದು ಹೇಳಿಕೆಯೊಂದರಲ್ಲಿ ತಿಳಿಸಿದೆ.

ತುರ್ತು ಸಂದರ್ಭಗಳಲ್ಲಿ ಪ್ರಾಂತವೊಂದರ ನೇರ ನಿಯಂತ್ರಣವನ್ನು ತೆಗೆದುಕೊಳ್ಳಲು ಸ್ಪೇನ್ ಸರಕಾರಕ್ಕೆ ಸಂವಿಧಾನದ ಈ ವಿಧಿ ಅವಕಾಶ ನೀಡುತ್ತದೆ.

ದಶಕಗಳಲ್ಲೇ ಸ್ಪೇನ್‌ನ ಅತ್ಯಂತ ಜಟಿಲ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಚರ್ಚಿಸುವುದಕ್ಕಾಗಿ ಸ್ಪೇನ್ ಶನಿವಾರ ತುರ್ತು ಸಂಪುಟ ಸಭೆಯನ್ನು ನಿಗದಿಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News