ರೈಲಿನಲ್ಲಿ ಅಪರಿಚಿತ ನೀಡಿದ ಜ್ಯೂಸ್ ಕುಡಿದವರು ಕಳೆದುಕೊಂಡದ್ದೇನು ಗೊತ್ತೇ ?

Update: 2017-10-19 16:00 GMT

ಕೋಟಾ (ರಾಜಸ್ಥಾನ),ಅ.19: ಉತ್ತರಪ್ರದೇಶದ ಮೀರತ್ ಸಮೀಪ ಹರಿದ್ವಾರ್ ಎಕ್ಸ್‌ಪ್ರೆಸ್ ರೈಲಿನ ಬೋಗಿಯೊಂದರಲ್ಲಿ ದರೋಡೆಕೋರರ ಗುಂಪೊಂದು ಪ್ರಯಾಣಿಕರ ನಗ, ನಗದು ಹಾಗೂ ಮೊಬೈಲ್‌ಫೋನ್‌ಗಳನ್ನು ದೋಚಿ, ಪರಾರಿಯಾಗಿದೆಯೆಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

   ಎರಡು ಕುಟುಂಬಗಳ ಐವರು ಸದಸ್ಯರು ಹರಿದ್ವಾರದಲ್ಲಿ ಉತ್ತರಕ್ರಿಯಾವಿಧಿಗಳನ್ನು ಮುಗಿಸಿ ರಾಜಸ್ಥಾನದ ಕೋಟಾಗೆ ವಾಪಸಾಗುತ್ತಿದ್ದಾಗ ಅವರನ್ನು ಅಪರಿಚಿತರು ದರೋಡೆಗೈದಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಳಿಕ ಕೋಟಾದ ಸರಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಅಪರಿಚಿತ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ.

  ವಿಗ್ಯಾನ್‌ನಗರ ನಿವಾಸಿ ಸಂಜಯ್ ಜೈಸ್ವಾಲ್ ಹಾಗೂ ಅವರ ಪತ್ನಿ ಮತ್ತು ಪುತ್ರ, ಮಾಲಾ ರಸ್ತೆಯ ನಿವಾಸಿ ರಾಜೇಶ್ ಸೈನ್ ಹಾಗೂ ಅವರ ಸಹೋದರ, ಹರಿದ್ವಾರದಿಂದ ರಾಜಸ್ಥಾನಕ್ಕೆ ಪ್ರಯಾಣಿಸುತ್ತಿದ್ದರು. ಪ್ರಯಾಣದ ವೇಳೆ ಅಪರಿಚಿತ ಪ್ರಯಾಣಿಕನೊಬ್ಬ ಇವರನ್ನು ಪರಿಚಯಿಸಿಕೊಂಡಿದ್ದ ಹಾಗೂ ಅವರಿಗೆ ಹಣ್ಣಿನ ರಸವನ್ನು ಕುಡಿಯಲು ನೀಡಿದ್ದ. ಹಣ್ಣಿನ ರಸವನ್ನು ಕುಡಿದ ಬಳಿಕ ಅವರು ಪ್ರಜ್ಞೆ ತಪ್ಪಿ ಬಿದ್ದರು. ಬೆಳಗ್ಗೆ ಎಚ್ಚರವಾದಾಗ ಅವರಿಗೆ ತಮ್ಮ ನಗ,ನಗದು ಹಾಗೂ ಮೊಬೈಲ್ ಫೋನ್ ದರೋಡೆಯಾಗಿರುವುದು ಅರಿವಾಯಿತೆಂದು ತಿಳಿಸಿದ್ದಾರೆ.

ಐವರು ಪ್ರಯಾಣಿಕರನ್ನು ಆಸ್ಪತೆಗೆ ದಾಖಲಿಸಲಾಗಿದ್ದು, ಅವರ ಪರಿಸ್ಥಿತಿ ಸ್ಥಿರವಾಗಿದೆಯೆಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News