ಬ್ರೆಝಿಲ್, ಘಾನಾ ಕ್ವಾರ್ಟರ್ ಫೈನಲ್‌ಗೆ

Update: 2017-10-19 18:09 GMT
ಬ್ರೆಝಿಲ್‌ ತಂಡ

ಹೊಸದಿಲ್ಲಿ, ಅ.19: ಇಲ್ಲಿ ನಡೆದ ಎರಡು ಫಿಫಾ ಅಂಡರ್ -17 ಫುಟ್ಬಾಲ್ ವಿಶ್ವಕಪ್‌ನ ಪ್ರಿ ಕ್ವಾಟರ್ ಫೈನಲ್‌ಗಳಲ್ಲಿ ಹೊಂಡುರಾಸ್‌ನ್ನು ಮಣಿಸಿದ ಬ್ರೆಝಿಲ್‌ಮತ್ತು ನೈಜರ್‌ನ್ನು ಬಗ್ಗು ಬಡಿದ ಘಾನಾ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

 ಬುಧವಾರ ರಾತ್ರಿ ಕೊಚ್ಚಿಯಲ್ಲಿ ನಡೆದ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹೊಂಡುರಾಸ್ ವಿರುದ್ಧ ಬ್ರೆಝಿಲ್ 3-0 ಅಂತರದಲ್ಲಿ ಬಗ್ಗು ಬಡಿಯಿತು.

 ಎರಡು ಬಾರಿ ಚಾಂಪಿಯನ್ ಪಟ್ಟ ಜಯಿಸಿದ್ದ ಘಾನಾ ನವಿಮುಂಬೈನಲ್ಲಿ ನಡೆದ ಇನ್ನೊಂದು ಪ್ರಿಕ್ವಾರ್ಟರ್ ಫೈನಲ್‌ನಲ್ಲಿ ನೈಜರ್ ವಿರುದ್ಧ 2-0 ಅಂತರದಲ್ಲಿ ಜಯ ಸಾಧಿಸಿತು.

ಅ.21ರಂದು ಗುವಾಹತಿಯಲ್ಲಿ ನಡೆಯಲಿರುವ ಕ್ವಾರ್ಟರ್ ಫೈನಲ್‌ನಲ್ಲಿ ಘಾನಾ ತಂಡ ಮಾಲಿಯನ್ನು ಎದುರಿಸಲಿದೆ.

ಅ.22ರಂದು ಕೋಲ್ಕತಾದಲ್ಲಿ ನಡೆಯಲಿರುವ ಇನ್ನೊಂದು ಕ್ವಾರ್ಟರ್ ಫೈನಲ್‌ನಲ್ಲಿ ಜರ್ಮನಿಗೆ ಬ್ರೆಝಿಲ್‌ನ ಸವಾಲು ಎದುರಾಗಲಿದೆ.

ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಬ್ರೆಝಿಲ್‌ನ ಬ್ರಿನ್ನೆರ್ 11 ಮತ್ತು 56ನೆ ನಿಮಿಷದಲ್ಲಿ ಮಾರ್ಕೊಸ್ ಆ್ಯಂಟೊನಿಯೊ 44ನೆ ನಿಮಿಷದಲ್ಲಿ ತಂಡದ ಗೆಲುವಿಗೆ ನೆರವಾದರು.

 ಘಾನಾ ತಂಡದ ಎರಿಕ್ ಆ್ಯಯಿಯ್ (45+4 ನಿ) ಮತ್ತು ರಿಚರ್ಡ್ ಡ್ಯಾನ್ಸೊ 90ನೆ ನಿಮಿಷದಲ್ಲಿ ಗೋಲು ದಾಖಲಿಸಿ ತಂಡವನ್ನು ಗೆಲುವಿನ ದಡ ತಲುಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News