ವಕಾರ್ ಯೂನಿಸ್ ದಾಖಲೆ ಮುರಿದ ಹಸನ್ ಅಲಿ

Update: 2017-10-19 18:21 GMT

ಅಬುಧಾಬಿ, ಅ.19: ಪಾಕಿಸ್ತಾನದ ಯುವ ವೇಗದ ಬೌಲರ್ ಹಸನ್ ಅಲಿ ಅವರು ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 50 ವಿಕೆಟ್ ಪಡೆಯುವ ಮೂಲಕ ತಮ್ಮ ದೇಶದ ವಕಾರ್ ಯೂನಿಸ್ ದಾಖಲೆಯನ್ನು ಮುರಿದಿದ್ದಾರೆ.

ಬುಧವಾರ ಇಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೂರನೆ ಏಕದಿನ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.

 ಹಸನ್ ಅವರು 24ನೆ ಪಂದ್ಯಗಳಲ್ಲಿ 50 ವಿಕೆಟ್‌ಗಳನ್ನು ತಮ್ಮ ಖಾತೆಗೆ ಸೇರಿಸಿದ್ದಾರೆ. ವಕಾರ್ ಯೂನಿಸ್ ಅವರು 27 ಪಂದ್ಯಗಳಲ್ಲಿ 50 ವಿಕೆಟ್ ಪಡೆದಿದ್ದರು. ಪಾಕಿಸ್ತಾನದಲ್ಲಿ ವಿಶ್ವದ ಅತ್ಯುತ್ತಮ ವೇಗದ ಬೌಲರ್‌ಗಳು ರೂಪುಗೊಳ್ಳುತ್ತಲೇ ಇದ್ದಾರೆ. ವಸೀಮ್ ಅಕ್ರಮ್, ಶುಐಬ್ ಅಕ್ತರ್, ವಕಾರ್ ಯೂನಿಸ್, ಮುಹಮ್ಮದ್ ಆಮಿರ್ ಇದೀಗ ಹಸನ್ ಅಲಿ ವಿಶ್ವ ಕ್ರಿಕೆಟ್‌ನಲ್ಲಿ ಭರವಸೆ ಮೂಡಿಸಿರುವ ಬೌಲರ್.

23ರ ಹರೆಯದ ವೇಗಿ ಹಸನ್ ಅಲಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ 16ಕ್ಕೆ 3 ವಿಕೆಟ್ ಉಡಾಯಿಸುವ ಮೂಲಕ ಭಾರತದ ಬ್ಯಾಟಿಂಗ್‌ನ ಬೆನ್ನಲುಬು ಮುರಿದಿದ್ದರು.

ಇದೀಗ ಶ್ರೀಲಂಕಾ ವಿರುದ್ಧದ ಮೂರನೆ ಏಕದಿನ ಪಂದ್ಯದಲ್ಲಿ 34ಕ್ಕೆ 4 ವಿಕೆಟ್ ಉಡಾಯಿದ್ದರು. ಅವರು ನಾಲ್ಕನೆ ವಿಕೆಟ್ ಪಡೆಯುವುದರೊಂದಿಗೆ ಯೂನಿಸ್ ದಾಖಲೆಯನ್ನು ಹಿಂದಿಕ್ಕಿದ್ದರು.

2017ರಲ್ಲಿ ಅಲಿ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದಿರುವ ಬೌಲರ್.ಅವರು 17 ಇನಿಂಗ್ಸ್‌ಗಳಲ್ಲಿ 41 ವಿಕೆಟ್ ಪಡೆದಿದ್ದಾರೆ.

ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಇನ್ನೂ ಎರಡು ಪಂದ್ಯಗಳು ಆಡಲು ಬಾಕಿ ಉಳಿದಿದ್ದು, ಅಲಿ ಅವರು ಇನ್ನಷ್ಟು ವಿಕೆಟ್‌ಗಳನ್ನು ತಮ್ಮ ಖಾತೆಗೆ ಸೇರಿಸುವ ಮೂಲಕ ತಮ್ಮ ದಾಖಲೆಗಳನ್ನು ಉತ್ತಮ ಪಡಿಸುವ ಯೋಜನೆಯಲ್ಲಿದ್ದಾರೆ.

ಮತ್ತೆ ವಿವಾದಲ್ಲಿ ಹಫೀಝ್ ಬೌಲಿಂಗ್

ಪಾಕಿಸ್ತಾನದ ಆಲ್‌ರೌಂಡರ್ ಮುಹಮ್ಮದ್ ಹಫೀಝ್ ಮತ್ತೆ ಬೌಲಿಂಗ್ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ.

ಬುಧವಾರ ನಡೆದ ಶ್ರೀಲಂಕಾ ವಿರುದ್ಧದ ಮೂರನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ 37 ಹರೆಯದ ಹಫೀಝ್ ಅವರ ಬೌಲಿಂಗ್ ಶೈಲಿಯ ಬಗ್ಗೆ ಅಂಪೈರ್‌ಗಳು ಸಂಶಯ ವ್ಯಕ್ತಪಡಿಸಿದ್ದಾರೆ.

 ಹಿಂದೆ ಎರಡು ಬಾರಿ ಸಂಶಯಾಸ್ಪದ ಬೌಲಿಂಗ್ ಶೈಲಿಯ ಕಾರಣಕ್ಕಾಗಿ ಅಮಾನತುಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News