ಎಸ್‌ಐಓ ಸಂಸ್ಥಾಪನಾ ದಿನಾಚರಣೆ

Update: 2017-10-20 11:24 GMT

ಉಡುಪಿ, ಅ.20: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ ಇದರ 35ನೆ ವರ್ಷದ ಸಂಸ್ಥಾಪನಾ ದಿನದ ಅಂಗವಾಗಿ ಎಸ್‌ಐಓ ಉಡುಪಿ ಶಾಖೆಯ ವತಿಯಿಂದ ಧ್ವಜಾರೋಹಣ ಮತ್ತು ಮಾಜಿ ಸದಸ್ಯರ ಸಮ್ಮಿಲನ ಕಾರ್ಯಕ್ರಮವನ್ನು ಗುರುವಾರ ಬ್ರಹ್ಮಗಿರಿಯ ಆದರ್ಶ ಸೆಂಟರ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು.

  ಮುಖ್ಯ ಅಥಿತಿಯಾಗಿ ಎಸ್‌ಐಓ ಉಡುಪಿ ಶಾಖೆಯ ಸ್ಥಾಪಕ ಅಧ್ಯಕ್ಷ ಕಲೀಲುಲ್ಲಾ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್‌ಐಓ ಮಾಜಿ ಸದಸ್ಯರಾದ ಡಾ.ಅಬ್ದುಲ್ ಅಜೀಜ್, ನಿಸಾರ್ ಅಹಮದ್, ಇಫ್ತೀಕಾರ್ ಉಡುಪಿ, ಝೀಯಾವುರ್ರಹ್ಮಾನ್, ಮಾಜಿ ಕಾರ್ಯಕರ್ತರಾದ ರಯೀಸ್, ರಿಯಾಝ್ ಅಹಮದ್ ಮಾತನಾಡಿದರು.

ಎಸ್‌ಐಓ ಸದಸ್ಯ ಫಾಝಿಲ್, ಅರ್ಬಾಝ್, ಫರ್ಹಾನ್ ಉಪಸ್ಥಿತರಿದ್ದರು. ಸ್ಥಾನಿಯ ಅಧ್ಯಕ್ಷ ಮಹಮ್ಮದ್ ಶಾರೂಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿ ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News