ಐಸಿಸಿ ಏಕದಿನ ರ‍್ಯಾಂಕಿಂಗ್‌: ಕೊಹ್ಲಿಯನ್ನು ಹಿಂದಿಕ್ಕಿದ ಎಬಿಡಿ ನಂ.1

Update: 2017-10-20 15:38 GMT

ಹೊಸದಿಲ್ಲಿ, ಅ.20: ದಕ್ಷಿಣ ಆಫ್ರಿಕದ ದಾಂಡಿಗ ಎಬಿಡಿ ವಿಲಿಯರ್ಸ್ ಏಕದಿನ ಕ್ರಿಕೆಟ್ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಎರಡನೆ ಸ್ಥಾನಕ್ಕೆ ತಳ್ಳಿ ನಂ.1 ಸ್ಥಾನ ಪಡೆದಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಎರಡನೆ ಏಕದಿನ ಪಂದ್ಯದಲ್ಲಿ ಸ್ಫೋಟಕ 176 ರನ್ ದಾಖಲಿಸಿರುವ ಹಿನ್ನೆಲೆಯಲ್ಲಿ ಎಬಿಡಿ ಅವರು ರ‍್ಯಾಂಕಿಂಗ್‌ನಲ್ಲಿ ಭಡ್ತಿ ಪಡೆದಿದ್ದಾರೆ.

 ಎಬಿಡಿ 104 ಎಸೆತಗಳಲ್ಲಿ 176 ರನ್ ಸಿಡಿಸಿದ್ದರು. ಇದರೊಂದಿಗೆ ಎಬಿಡಿ 14 ಬಾರಿ ಏಕದಿನ ಕ್ರಿಕೆಟ್ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ನಲ್ಲಿ ನಂ1 ಸ್ಥಾನ ಗಳಿಸಿದ್ದಾರೆ.

 ಬಾಂಗ್ಲಾ ವಿರುದ್ಧ 3 ಪಂದ್ಯಗಳ ಸರಣಿಯಲ್ಲಿ 2-0 ಗೆಲುವು ದಾಖಲಿಸಿರುವ ದಕ್ಷಿಣ ಆಫ್ರಿಕ ತಂಡ ಎಂಆರ್‌ಎಫ್ ಟೈರ್ಸ್‌ ಐಸಿಸಿ ಏಕದಿನ ಟೀಮ್ ರ‍್ಯಾಂಕಿಂಗ್‌ನಲ್ಲಿ ಭಾರತವನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೆ ವಾಪಸಾಗಿದೆ.

ಏಕದಿನ ಕ್ರಿಕೆಟ್ ಟಾಪ್ -10 ದಾಂಡಿಗರು

1.ಎಬಿ ಡಿವಿಲಿಯರ್ಸ್‌(ದ.ಆಫ್ರಿಕ).

2.ವಿರಾಟ್ ಕೊಹ್ಲಿ (ಭಾರತ)

3.ಡೇವಿಡ್ ವಾರ್ನರ್(ಆಸ್ಟ್ರೇಲಿಯ)

4.ಬಾಬರ್ ಅಝಮ್(ಪಾಕಿಸ್ತಾನ)

5.ಕ್ವಿಂಟನ್ ಡೆ ಕಾಕ್(ದ.ಆಫ್ರಿಕ)

6.ಜೋ ರೂಟ್(ಇಂಗ್ಲೆಂಡ್)

7.ರೋಹಿತ್ ಶರ್ಮಾ(ಭಾರತ)

8.ಕೇನ್ ವಿಲಿಯಮ್ಸನ್ (ನ್ಯೂಝಿಲೆಂಡ್)

9.ಹಾಶಿಮ್ ಅಮ್ಲ(ದ.ಆಫ್ರಿಕ)

10.ಎಫ್ ಡು ಪ್ಲೆಸಿಸ್(ದ.ಆಫ್ರಿಕ)

ಟಾಪ್-10 ಬೌಲರ್‌ಗಳು

1.ಹಸನ್ ಅಲಿ(ಪಾಕಿಸ್ತಾನ)

2.ಇಮ್ರಾನ್ ತಾಹಿರ್(ದ.ಆಫ್ರಿಕ)

3.ಜೋಶ್ ಹಝೇಲ್‌ವುಡ್(ಆಸ್ಟ್ರೇಲಿಯ)

4.ಕಾಗಿಸೊ ರಬಾಡ(ದ.ಆಫ್ರಿಕ)

5.ಮಿಚೆಲ್ ಸ್ಟಾರ್ಕ್(ಆಸ್ಟ್ರೇಲಿಯ)

6.ಜಸ್‌ಪ್ರೀತ್ ಬುಮ್ರಾ(ಭಾರತ)

7.ಟ್ರೆಂಟ್ ಬೌಲ್ಟ್(ನ್ಯೂಝಿಲೆಂಡ್)

8.ಅಕ್ಷರ್ ಪಟೇಲ್(ಭಾರತ)

9.ರಶೀದ್ ಖಾನ್(ಅಫ್ಘಾನಿಸ್ತಾನ)

10.ಸುನೀಲ್ ನರೇನ್(ವೆಸ್ಟ್‌ಇಂಡೀಸ್).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News