×
Ad

ಅಮೆರಿಕ-ಇಂಗ್ಲೆಂಡ್ ಸಮಬಲದ ಹೋರಾಟ ನಿರೀಕ್ಷೆ

Update: 2017-10-20 23:35 IST

ಮಾರ್ಗೊವಾ, ಅ.20: ಇಲ್ಲಿ ಶನಿವಾರ ನಡೆಯಲಿರುವ ಫಿಫಾ ಅಂಡರ್-17 ವಿಶ್ವಕಪ್ ಕ್ವಾರ್ಟರ್ ಫೈನಲ್‌ನಲ್ಲಿ ಅಮೆರಿಕ ತಂಡ ಇಂಗ್ಲೆಂಡನ್ನು ಎದುರಿಸಲಿದೆ.

ಉಭಯ ತಂಡಗಳು ಈ ತನಕ ಪ್ರಶಸ್ತಿ ಜಯಿಸಿಲ್ಲ. ಅಮೆರಿಕ 1999ರ ಆವೃತ್ತಿಯ ಫಿಫಾ ಯು-ವರ್ಲ್ಡ್ ಕಪ್‌ನಲ್ಲಿ ನಾಲ್ಕನೆ ಸ್ಥಾನ ಪಡೆದಿರುವುದು ಅಮೆರಿಕದ ಅತ್ಯುತ್ತಮ ಸಾಧನೆ.

ಇಂಗ್ಲೆಂಡ್ ಫಿಫಾ ಯು -17 ವಿಶ್ವಕಪ್‌ಗೆ ಪಾದಾರ್ಪ ಣೆಗೈದು 10 ವರ್ಷ ಕಳೆದಿದ್ದರೂ, ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ.2007ರಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದರೂ ಜರ್ಮನಿ ವಿರುದ್ಧ ಸೋತು ನಿರ್ಗಮಿಸಿತ್ತು. 2011ರಲ್ಲಿ ಮೆಕ್ಸಿಕೋದಲ್ಲಿ ಜರ್ಮನಿ ತಂಡ ಮತ್ತೊಮ್ಮೆ ಇಂಗ್ಲೆಂಡ್‌ನ ಕನಸನ್ನು ಭಗ್ನಗೊಳಿಸಿತ್ತು.

 ಇದೀಗ ನಡೆಯುತ್ತಿರುವ ಫಿಫಾ ಅಂಡರ್-17 ವಿಶ್ವಕಪ್ ಫುಟ್ಬಾಲ್ ಟೂರ್ನಮೆಂಟ್‌ನ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಜಪಾನನ್ನು ಇಂಗ್ಲೆಂಡ್ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ 5-3 ಅಂತರದಲ್ಲಿ ಸೋಲಿಸುವ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

 ಇದಕ್ಕೂ ಮೊದಲು ಗ್ರೂಪ್ ಹಂತದಲ್ಲಿ 3 ಪಂದ್ಯಗಳಲ್ಲೂ ಗೆಲುವು ದಾಖಲಿಸಿ ಅಜೇಯವಾಗಿ ಪ್ರಿ ಕ್ವಾರ್ಟರ್ ಫೈನಲ್ ತಲುಪಿತ್ತು. ಎಫ್’ ಗ್ರೂಪ್‌ನಲ್ಲಿ ಚಿಲಿ ವಿರುದ್ಧ 4-0, ಮೆಕ್ಸಿಕೊ ವಿರುದ್ಧ 3-2 ಮತ್ತು ಇರಾಕ್ ವಿರುದ್ಧ 4-0 ಅಂತರದಲ್ಲಿ ಗೆಲುವು ದಾಖಲಿಸಿತ್ತು.

 ಅಮೆರಿಕ ತಂಡ ಗ್ರೂಪ್ ಹಂತದಲ್ಲಿ ‘ಎ’ ಗ್ರೂಪ್‌ನಲ್ಲಿ ಕೊಲಂಬಿಯಾ ವಿರುದ್ಧ 3-1 ಅಂತರದಲ್ಲಿ ಸೋಲು ಅನುಭವಿಸಿತ್ತು. ಭಾರತದ ವಿರುದ್ಧ 3-0 ಮತ್ತೂ ಘಾನಾ ವಿರುದ್ಧ 1-0 ಅಂತರದಲ್ಲಿ ಜಯ ಗಳಿಸಿ ಪ್ರಿ ಕ್ವಾರ್ಟರ್ ಫೈನಲ್ ತಲುಪಿತ್ತು.

ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಪರಾಗ್ವೆ ವಿರುದ್ಧ 5-0 ಭರ್ಜರಿ ಗೆಲುವಿನೊಂದಿಗೆ ಅಮೆರಿಕ ಕ್ವಾರ್ಟರ್ ಫೈನಲ್‌ನಲ್ಲಿ ಅವಕಾಶ ದೃಢಪಡಿಸಿದೆ.

►ಅಮೆರಿಕ-ಇಂಗ್ಲೆಂಡ್

ಸ್ಥಳ : ಪಂಡಿತ್ ಜವಾಹರಲಾಲ್ ನೆಹರೂ ಸ್ಟೇಡಿಯಂ, ಗೋವಾ

ಸಮಯ: ರಾತ್ರಿ 8:00 ಗಂಟೆಗೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News