ಡಿಜಿಟಲ್ ಮಾರ್ಕೆಟಿಂಗ್ ಮತ್ತು ವೃತ್ತಿಪರ ಕೌಶಲ್ಯ ಅಭಿವೃದ್ಧಿ ಬಗ್ಗೆ ಉಚಿತ ತರಬೇತಿ

Update: 2017-10-22 05:42 GMT

ಮಂಗಳೂರು, ಅ.22: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಮಂಗಳೂರಿನ ಲಿವಾ ಗ್ರೂಪ್ ಸಹಯೋಗದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಮತ್ತು ಇನ್ನಿತರ ವೃತ್ತಿಪರ ಕೌಶಲ್ಯ ಅಭಿವೃದ್ಧಿ ಬಗ್ಗೆ ತರಬೇತಿ ಕಾರ್ಯಾಗಾರವು ಅ.28ರಂದು ಅಪರಾಹ್ನ 2:30ಕ್ಕೆ ಕಂಕನಾಡಿಯಲ್ಲಿರುವ ಟ್ಯಾಲೆಂಟ್ ಸಭಾಂಗಣದಲ್ಲಿ ನಡೆಯಲಿದೆ.

ನಿರುದ್ಯೋಗಿ ಯುವಕ-ಯುವತಿಯರು ಮನೆಯಲ್ಲೇ ಕುಳಿತು ಸಂಪಾದಿಸಬಹುದಾದ ಮಾರ್ಗೋಪಾಯಗಳ ಬಗ್ಗೆ ತರಬೇತಿ ನೀಡಲಾಗುವುದು. ಡಿಜಿಟಲ್ ಮಾರ್ಕೆಟಿಂಗ್ ಜೊತೆಗೆ ಮೊಂಟೋಸರಿ, ಅರ್ಲಿ ಲರ್ನಿಂಗ್ ಫೌಂಡೇಶನ್, ಇ.ಎಲ್.ಟಿ.ಎಸ್. ಮೊದಲಾದ ವಿಷಯಗಳಲ್ಲಿ ತರಬೇತಿ ನೀಡಲಾಗುವುದು. ವಿದ್ಯಾಭ್ಯಾಸ ಕಲಿತು ಸುಮ್ಮನೆ ಕಾಲ ಕಳೆಯುವ ಯುವ ಸಮುದಾಯಕ್ಕೆ ಈ ತರಬೇತಿ ಕಾರ್ಯಾಗಾರವು ಹೊಸ ಅವಕಾಶಗಳನ್ನು ಪರಿಚಯಿಸಲಿದೆ.

ಈ ಅವಕಾಶವನ್ನು ಸದುಪಯೋಗಗೊಳಿಸುವಂತೆ ಟ್ಯಾಲೆಂಟ್ ಸಂಸ್ಥೆಯ ಅಧ್ಯಕ್ಷ ರಿಯಾಝ್ ಕಣ್ಣೂರು ಪ್ರಕಟನೆಯಲ್ಲಿ ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ (ರಿ), ವಿಶ್ವಾಸ್ ಕ್ರೌನ್, ಕಂಕನಾಡಿ, ಮಂಗಳೂರು-2, ದೂರವಾಣಿ: 0824-4267883, 9844773906 ಅನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News