ಪಿಡಿಪಿ ಮುಖಂಡ ವಿಕ್ರಮಾದಿತ್ಯ ಸಿಂಗ್ ರಾಜೀನಾಮೆ

Update: 2017-10-22 14:42 GMT

  ಜಮ್ಮು, ಅ.22: ಆಡಳಿತಾರೂಢ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ(ಪಿಡಿಪಿ)ಯ ಹಿರಿಯ ಮುಖಂಡ ವಿಕ್ರಮಾದಿತ್ಯ ಸಿಂಗ್ ರಾಜೀನಾಮೆ ನೀಡಿದ್ದು, ಇದು ಪಕ್ಷಕ್ಕೆ ಭಾರೀ ಹಿನ್ನಡೆ ಎಂದು ಹೇಳಲಾಗಿದೆ. ಪಿಡಿಪಿ ಜಮ್ಮು ಪ್ರದೇಶದ ಜನರ ಬೇಡಿಕೆ ಮತ್ತು ನಿರೀಕ್ಷೆಗಳನ್ನು ನಿರ್ಲಕ್ಷಿಸಿರುವ ಕಾರಣ ಪಕ್ಷದಲ್ಲಿ ಮುಂದುವರಿಯಲು ಇಷ್ಟವಿಲ್ಲದೆ ರಾಜೀನಾಮೆ ನೀಡುತ್ತಿದ್ದೇನೆ ಎಂದವರು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

 ದೋಗ್ರ ರಾಜಮನೆತನದ ಕಟ್ಟಕಡೆಯ ದೊರೆ ಮಹಾರಾಜ ಹರಿಸಿಂಗ್  ಮೊಮ್ಮಗನಾಗಿರುವ ವಿಕ್ರಮಾದಿತ್ಯ ಸಿಂಗ್, 2015ರಲ್ಲಿ ಪಿಡಿಪಿಗೆ ಸೇರಿದ್ದು ಜಮ್ಮು-ಕಾಶ್ಮೀರದ ವಿಧಾನಪರಿಷತ್ ಸದಸ್ಯರಾಗಿದ್ದಾರೆ. ಅವರ ತಂದೆ ಕರಣ್ ಸಿಂಗ್ ಕಾಂಗ್ರೆಸ್ ಮುಖಂಡರಾಗಿದ್ದಾರೆ.

  ರಾಜ್ಯದ , ಅದರಲ್ಲೂ ವಿಶೇಷವಾಗಿ ಜಮ್ಮು ಪ್ರದೇಶದ ಬಗ್ಗೆ ಕಳೆದ ಕೆಲ ಸಮಯದಿಂದ ಕಳವಳ ವ್ಯಕ್ತಪಡಿಸಿದ್ದೆ. ಆದರೆ ಇದನ್ನು ಪಕ್ಷ ತಿರಸ್ಕರಿಸಿದೆ. ಪಕ್ಷದ ಸದಸ್ಯನಾಗಿ ಮುಂದುವರಿಯಲು ನೈತಿಕ ಹಕ್ಕು ಹೊಂದಿಲ್ಲ ಎಂಬ ಕಾರಣಕ್ಕೆ ರಾಜೀನಾಮೆ ನೀಡುತ್ತಿದ್ದು ತಕ್ಷಣವೇ ಅಂಗೀಕರಿಸಬೇಕು ಎಂದವರು ಪಕ್ಷದ ಅಧ್ಯಕ್ಷೆ ಮೆಹಬೂಬ ಮುಫ್ತಿಗೆ ಬರೆದಿರುವ ಪತ್ರದಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News