ಪೊಲೀಸ್ ಅಧಿಕಾರಿ ಮನೆಯಲ್ಲಿ ಉಗ್ರರಿಂದ ದಾಂಧಲೆ

Update: 2017-10-22 15:03 GMT

ಶ್ರೀನಗರ, ಆ. 22: ಜಮ್ಮು ಹಾಗೂ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ರವಿವಾರ ಉಗ್ರರ ಗುಂಪೊಂದು ಪೊಲೀಸ್ ಅಧಿಕಾರಿಯೋರ್ವರ ನಿವಾಸ ಪ್ರವೇಶಿಸಿ ದಾಂಧಲೆ ನಡೆಸಿದೆ.

ತ್ರಾಲ್ ಪ್ರದೇಶದ ಬಟಗುಂಡ್ ಗ್ರಾಮದಲ್ಲಿರುವ ಎಎಸ್‌ಐ ಗುಲಾಂ ಅಹ್ಮದ್ ಭಟ್ ಅವರ ನಿವಾಸ ಪ್ರವೇಶಿಸಿದ ಉಗ್ರರು ದಾಂಧಲೆ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಉಗ್ರರು ಮನೆ ಪ್ರವೇಶಿಸುತ್ತಿದ್ದಂತೆ ಗುಲಾಮ್ ಅಹ್ಮದ್ ಅವರ ತಂದೆ ಸೇರಿದಂತೆ ಇತರ ಸದಸ್ಯರು ತಪ್ಪಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News