ಮೊದಲ ಏಕದಿನ: ಭಾರತ ವಿರುದ್ಧ ನ್ಯೂಝಿಲೆಂಡ್‌ಗೆ ಜಯ

Update: 2017-10-22 16:12 GMT

ಮುಂಬೈ, ಅ.22: ಟಾಮ್ ಲಥಾಮ್ ಶತಕ ಹಾಗೂ ರಾಸ್ ಟೇಲರ್ ಅರ್ಧಶತಕದ ಸಹಾಯದಿಂದ ನ್ಯೂಝಿಲೆಂಡ್ ತಂಡ ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು 6 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ.

ಈ ಗೆಲುವಿನ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ರವಿವಾರ ವಾಂಖೆಡೆ ಸ್ಟೇಡಿಯಂನಲ್ಲಿ ಟಾಸ್ ಜಯಿಸಿದ ಭಾರತದ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಕೊಹ್ಲಿಯ ಏಕಾಂಗಿ ಹೋರಾಟದ ನೆರವಿನಿಂದ ಭಾರತ 8 ವಿಕೆಟ್‌ಗಳ ನಷ್ಟಕ್ಕೆ 280 ರನ್ ಗಳಿಸಿತು.

ಗೆಲುವಿಗೆ ಕಠಿಣ ಸವಾಲು ಪಡೆದಿದ್ದ ಕಿವೀಸ್ ತಂಡ ಲಥಾಮ್ ಬಾರಿಸಿದ ನಾಲ್ಕನೆ ಏಕದಿನ ಶತಕದ ನೆರವಿನಿಂದ 49 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 284 ರನ್ ಗಳಿಸಿತು.

ಮಾರ್ಟಿನ್ ಗಪ್ಟಿಲ್(32) ಹಾಗೂ ಕಾಲಿನ್ ಮುನ್ರೊ(28) ಮೊದಲ ವಿಕೆಟ್‌ಗೆ 48 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ಆದರೆ, ಕಿವೀಸ್ ತಂಡ 80 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತು. ನಾಯಕ ವಿಲಿಯಮ್ಸನ್ 6 ರನ್‌ಗೆ ಔಟಾದರು. ಆಗ 4ನೆ ವಿಕೆಟ್‌ಗೆ ಬರೋಬ್ಬರಿ 200 ರನ್ ಜೊತೆಯಾಟ ನಡೆಸಿದ ಟೇಲರ್(95) ಹಾಗೂ ಲಥಾಮ್(ಅಜೇಯ 103,102 ಎಸೆತ, 8 ಬೌಂಡರಿ, 2 ಸಿಕ್ಸರ್) ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಭಾರತದ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದರು. ಕಿವೀಸ್‌ಗೆ ಒಂದು ಓವರ್ ಬಾಕಿ ಇರುವಾಗಲೇ ಗೆಲುವು ತಂದರು.

ಕೊಹ್ಲಿ ಶತಕ, ಭಾರತ 280/8: ಇದಕ್ಕೆ ಮೊದಲು ನಾಯಕ ವಿರಾಟ್ ಕೊಹ್ಲಿ ಭರ್ಜರಿ ಶತಕದ ಸಹಾಯದಿಂದ ಭಾರತ ತಂಡ ನ್ಯೂಝಿಲೆಂಡ್‌ಗೆ ಮೊದಲ ಏಕದಿನ ಪಂದ್ಯದ ಗೆಲುವಿಗೆ 281 ರನ್ ಗುರಿ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News