ಉಡುಪಿ ಗ್ರಾಂಡ್ ಚಾಲೆಂಜ್: ಉತ್ತಮ ಸಲಹೆಗೆ 50 ಸಾವಿರ ರೂ. ಬಹುಮಾನ

Update: 2017-10-23 17:56 GMT

ಉಡುಪಿ, ಅ.23: ಜಿಲ್ಲಾಡಳಿತವು ಗ್ರಾಂಡ್ ಚಾಲೆಂಜ್ ಉಡುಪಿಯಡಿ ಜಿಲ್ಲೆಯ ಇಂಜಿನಿಯರಿಂಗ್ ಕಾಲೇಜು ಅಥವಾ ಆಸಕ್ತರಿಂದ ಪ್ರಮುಖ ನಾಲ್ಕು ವಿಷಯಗಳಿಗೆ ಸಂಬಂಧಿಸಿ ಸಂವಹನ ಯೋಜನೆ ರೂಪಿಸಲು ನವೀನ ಯೋಜನೆ ಗಳನ್ನು ನೀಡು ವಂತೆ ಉಡುಪಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಉಡುಪಿ, ಅ.23: ಜಿಲ್ಲಾಡಳಿತವು ಗ್ರಾಂಡ್ ಚಾಲೆಂಜ್ ಉಡುಪಿಯಡಿ ಜಿಲ್ಲೆಯ ಇಂಜಿನಿಯರಿಂಗ್ ಕಾಲೇಜು ಅಥವಾ ಆಸಕ್ತರಿಂದ ಪ್ರಮುಖ ನಾಲ್ಕು ವಿಷಯಗಳಿಗೆ ಸಂಬಂಧಿಸಿ ಸಂವಹನ ಯೋಜನೆ ರೂಪಿಸಲು ನವೀನ ಯೋಜನೆ ಗಳನ್ನು ನೀಡುವಂತೆ ಉಡುಪಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಈ ಸಂಬಂಧ ಉಡುಪಿ ಜಿಲ್ಲಾಧಿಕಾರಿ ಕಚೇರಿ ವೆಬ್‌ಸೈಟ್ -www.udupi.nic.in- ಮೂಲಕ ಸಲಹೆಗಳನ್ನು ಆಹ್ವಾನಿಸಲಾಗಿದ್ದು, ಮುಂದಿನ ನ.10ರೊಳಗಾಗಿ ಮಾಹಿತಿ ನೀಡಿ. ಉತ್ತಮ ಯೋಚನೆಗಳಿಗೆ 50,000 ರೂ. ಬಹುಮಾನ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಘನತ್ಯಾಜ್ಯ ನಿರ್ವಹಣೆ, ಕುಡಿಯುವ ನೀರಿನ ಸಂಪನ್ಮೂಲ ಸದ್ಬಳಕೆ, ಪೂರ್ವ ಮತ್ತು ಪ್ರಾಥಮಿಕ ಶಾಲಾ ಶಿಕ್ಷಣ, ಮುಟ್ಟಿನ ಆರೋಗ್ಯ ನಿರ್ವಹಣೆ ವಿಷಯಗಳ ಬಗ್ಗೆ ಯೋಜನೆಗಳ ಸಮರ್ಪಕ ಅನುಷ್ಠಾನ ಸಂಬಂಧ ಯೋಜನೆಗಳನ್ನು ರೂಪಿಸಲು ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News