ಮತದಾರರ ಪಟ್ಟಿ ಸೇರ್ಪಡೆಗೆ ಅವಕಾಶ

Update: 2017-10-23 17:57 GMT

ಉಡುಪಿ, ಅ.23: ಕರ್ನಾಟಕ ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರ ದಿಂದ ಕರ್ನಾಟಕ ವಿಧಾನಪರಿಷತ್ತಿಗೆ ಸಂಬಂಧಿಸಿದಂತೆ ಮತದಾರರ ಪಟ್ಟಿಯನ್ನು ತಯಾರಿಸುವ ಸಲುವಾಗಿ ನಮೂನೆ-18 (ಪದವೀಧರ ಕ್ಷೇತ್ರಕ್ಕೆ) ನಮೂನೆ-19 (ಶಿಕ್ಷಕರ ಕ್ಷೇತ್ರಕ್ಕೆ) ಸಹಾಯಕ ಕಮೀಷನರ್ ಕಚೇರಿ, ತಾಲೂಕು ಕಚೇರಿ ಉಡುಪಿ, ಕುಂದಾಪುರ, ಕಾರ್ಕಳ ಹಾಗೂ ವಿಶೇಷ ತಹಶೀಲ್ದಾರರ ಕಚೇರಿ ಬ್ರ್ಮಾವರ, ಬೈಂದೂರು ಇಲ್ಲಿ ಲ್ಯವಿದೆ.

ಪದವೀಧರ/ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ನೊಂದಣಿ ಮಾಡಲು ಇಚ್ಚಿಸುವ ಅರ್ಹರು ಸಹಾಯಕ ಕಮೀಷನರ್ ಕಚೇರಿ, ತಾಲೂಕು ಕಚೇರಿ ಕುಂದಾಪುರ, ಕಾರ್ಕಳ, ಉಡುಪಿ ಹಾಗೂ ವಿಶೇಷ ತಹಶೀಲ್ದಾರರ ಕಚೇರಿ ಬ್ರಹ್ಮಾವರ, ಬೈಂದೂರು ಕಚೇರಿಗೆ ಭೇಟಿ ನೀಡಿ ನಿಗದಿತ ನಮೂನೆ ಯನ್ನು ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಸಲ್ಲಿಸಿದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News