ಹೊಟೇಲ್‌ನಲ್ಲಿ ರಾಹುಲ್ ಗಾಂಧಿಯನ್ನು ಭೇಟಿಯಾದ ಹಾರ್ದಿಕ್ ಪಟೇಲ್ !

Update: 2017-10-23 18:09 GMT

ಅಹ್ಮದಾಬಾದ್, ಅ. 21: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ತಾನು ಭೇಟಿಯಾಗಿಲ್ಲ ಎಂಬ ಪಾಟಿದಾರ್ ಅನಾಮತ್ ಆಂದೋಲನ ಸಮಿತಿ (ಪಿಎಎಎಸ್) ನಾಯಕ ಹಾರ್ದಿಕ ಪಟೇಲ್ ಹೇಳಿರುವುದು ಸುಳ್ಳು ಎಂಬುದನ್ನು ಇಂಗ್ಲಿಷ್ ಸುದ್ದಿ ವಾಹಿನಿಯೊಂದು ಬಹಿರಂಗಗೊಳಿಸಿದೆ.

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ರಹಸ್ಯ ಮಾತುಕತೆ ನಡೆಸಿದ ಬಳಿಕ ಹೋಟೆಲ್‌ನ ಇಲವೇಟರ್‌ಗೆ ಹಾರ್ದಿಕ್ ಪಟೇಲ್ ಪ್ರವೇಶಿಸುತ್ತಿರುವ ದೃಶ್ಯ ಸುದ್ದಿ ವಾಹಿನಿಗೆ ಲಭ್ಯವಾಗಿದೆ ಎನ್ನಲಾಗಿದೆ.

 ಇಬ್ಬರೂ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂಬ ವರದಿ ನಡುವೆಯೂ ಹಾರ್ದಿಕ್ ಪಟೇಲ್ ಅವರು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿರುವ ಸುದ್ದಿಯನ್ನು ನಿರಾಕರಿಸಿದ್ದರು. ಆದಾಗ್ಯೂ, ಇಬ್ಬರೂ ನಾಯಕರ ನಡುವೆ ಮಾತುಕತೆ ನಡೆದಿರುವು ದಕ್ಕೆ ಪುರಾವೆಯಾಗಿ ಸಿಸಿಟಿವಿ ದೃಶ್ಯ ದೊರೆತಿದೆ.

ಹಾರ್ದಿಕ್ ಪಟೇಲ್ ಅವರು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿಲ್ಲ ಎಂದು ಪಾಟಿದಾರ್ ನಾಯಕ ದಿನೇಶ್ ಪಟೇಲ್ ಹೇಳಿದ್ದರು. ನವೆಂಬರ್ 1ರಿಂದ 3ರ ವರೆಗಿನ ಗುಜರಾತ್ ಭೇಟಿ ಸಂದರ್ಭ ನಾವು ರಾಹುಲ್ ಗಾಂಧಿ ಅವರನ್ನು ಭೇಟಿಯಾಗ ಲಿದ್ದೇವೆ ಎಂದು ಅವರು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News