ಗುಜರಾತ್ ಸರಕಾರ ಕೈಗಾರಿಕೋದ್ಯಮಿಗಳಿಂದ ನಡೆಯುತ್ತಿದೆ: ರಾಹುಲ್ ಗಾಂಧಿ

Update: 2017-10-23 18:17 GMT

ಗಾಂಧಿನಗರ, ಅ. 21: ಬಿಜೆಪಿ ತನ್ನ ಪಕ್ಷ ಸೇರಲು ಪಾಟಿದಾರ್ ನಾಯಕರಿಗೆ ಲಂಚ ನೀಡಿದೆ ಎಂಬ ಆರೋಪದ ನಡುವೆ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ಗುಜರಾತ್‌ನ ಬಿಜೆಪಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇಂದಿಲ್ಲಿ ನವ್‌ಸರ್ಜನ್ ಜನಾದೇಶ ಮಹಾಸಮ್ಮೇಳನದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಗುಜರಾತ್ ಸರಕಾರದ ವಿರುದ್ಧ ಜನರು ಬೀದಿಗಿಳಿದಿದ್ದಾರೆ ಎಂದರು. ಗುಜರಾತ್ ಸರಕಾರ ಜನರಿಂದ ನಡೆಯುತ್ತಿಲ್ಲ. ಬದಲಾಗಿ 5ರಿಂದ 10 ಕೈಗಾರಿಕೋದ್ಯಮಿಗಳಿಂದ ನಡೆಯುತ್ತಿದೆ ಎಂದು ಅವರು ಹೇಳಿದರು.

ಕಳೆದ 25 ವರ್ಷಗಳಿಂದ ಗುಜರಾತ್‌ನಲ್ಲಿ ಜನರ ಸರಕಾರವಿಲ್ಲ. ಆದುದರಿಂದ ಗುಜರಾತ್ ಸಮಾಜದ ಪ್ರತಿ ವರ್ಗವೂ ಈ ಚಳವಳಿಯಲ್ಲಿ ಭಾಗಿಯಾಗಿದೆ ಎಂದು ಅವರು ಹೇಳಿದರು.

ಗುಜರಾತ್ ಸಮಾಜದ ಪ್ರತಿ ವರ್ಗದ ಕೋಟ್ಯಂತರ ಯುವ ಜನರು ವೌನವಾಗಿ ಕೂರಲಾರರು. ಯುವ ಜನರ ಧ್ವನಿ ಅಡಗಿಸಲು ಅಸಾಧ್ಯ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News