‘ಮೆರ್ಸಲ್’ ಸಿನೆಮಾದ ಸೆನ್ಸಾರ್ ಪ್ರಮಾಣಪತ್ರ ರದ್ದತಿ ಕೋರಿ ಅರ್ಜಿ

Update: 2017-10-24 13:16 GMT

ಚೆನ್ನೈ, ಅ.24: ನಟ ವಿಜಯ್ ಮುಖ್ಯಭೂಮಿಕೆಯ ‘ಮೆರ್ಸಲ್’ ಸಿನೆಮಾದ ಸೆನ್ಸಾರ್ ಪ್ರಮಾಣ ಪತ್ರ ರದ್ದುಗೊಳಿಸಬೇಕೆಂದು ‘ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ (ಸಿಬಿಎಫ್‌ಸಿ)ಗೆ ಸೂಚಿಸಬೇಕೆಂದು ಕೋರಿ ವಕೀಲರೋರ್ವರು ಮದ್ರಾಸ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ದಾಖಲಿಸಿದ್ದಾರೆ.

 ಈ ಸಿನೆಮಾದಲ್ಲಿ ರಾಷ್ಟ್ರದ ಆರೋಗ್ಯಕ್ಷೇತ್ರದ ಬಗ್ಗೆ ಹಾಗೂ ಇತ್ತೀಚೆಗೆ ಜಾರಿಗೊಂಡಿರುವ ಜಿಎಸ್‌ಟಿ ಬಗ್ಗೆ ತಪ್ಪು ಮಾಹಿತಿ ಪ್ರಚಾರ ಮಾಡುವ ಮೂಲಕ ದೇಶದ ಕುರಿತು ಕೆಟ್ಟ ಅಭಿಪ್ರಾಯ ಮೂಡಿಸಲಾಗುತ್ತಿದೆ ಎಂದು ಅರ್ಜಿದಾರ ಎ.ಅಶ್ವಥಾಮನ್ ಆರೋಪಿಸಿದ್ದು, ಇಂತಹ ಸಿನೆಮಾ ಸಾರ್ವಜನಿಕ ವೀಕ್ಷಣೆಗೆ ಅರ್ಹ ಎಂದು ಸಿಬಿಎಫ್‌ಸಿ ಪ್ರಮಾಣಪತ್ರ ನೀಡಿರುವುದು ಅಚ್ಚರಿ ತಂದಿದೆ ಎಂದಿದ್ದಾರೆ.

ಈ ಸಿನೆಮಾದ ಕತೆಗೂ ಮೇಲೆ ತಿಳಿಸಿದ ಸನ್ನಿವೇಶ, ಸಂಭಾಷಣೆಗೂ ಯಾವುದೇ ಸಂಬಂಧವಿಲ್ಲ. ವಂಚಕ ನಟರ ಹಾಗೂ ನಿರ್ಮಾಪಕರ ನಯ ವಂಚನೆಯಿಂದ ಯುವ ವೀಕ್ಷಕರನ್ನು ರಕ್ಷಿಸುವ ಜವಾಬ್ದಾರಿ ಸಿಬಿಎಫ್‌ಸಿಯದ್ದಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News