×
Ad

ಚೀನಾ ಅಧ್ಯಕ್ಷರಾಗಿ 2ನೆ ಅವಧಿಗೆ ಕ್ಸಿ ಜಿನ್‌ಪಿಂಗ್ ನೇಮಕ

Update: 2017-10-24 22:01 IST

ಬೀಜಿಂಗ್, ಅ. 24: ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ರನ್ನು ಎರಡನೆ ಬಾರಿಗೆ ಐದು ವರ್ಷಗಳ ಅವಧಿಗೆ ಮರುನೇಮಕಗೊಳಿಸುವ ಪ್ರಸ್ತಾಪಕ್ಕೆ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷವು ಮಂಗಳವಾರ ಅನುಮೋದನೆ ನೀಡಿದೆ ಹಾಗೂ ಅವರ ಆಯ್ಕೆಯ ನಾಯಕರ ತಂಡವೊಂದನ್ನೂ ನೇಮಿಸಿದೆ.

ಒಂದು ವಾರ ಕಾಲ ನಡೆದ ಪಕ್ಷದ ಕಾಂಗ್ರೆಸ್ (ಸಮಾವೇಶ)ನಲ್ಲಿ 64 ವರ್ಷದ ಜಿನ್‌ಪಿಂಗ್‌ರನ್ನು ಎರಡನೆ ಐದು ವರ್ಷದ ಅವಧಿಗೆ ಅಧ್ಯಕ್ಷರಾಗಿ ಮರುನೇಮಕಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಚೀನಾ ಕಮ್ಯುನಿಸ್ಟ್ ಪಕ್ಷದ ಕಾಂಗ್ರೆಸ್ ಐದು ವರ್ಷಗಳಿಗೊಮ್ಮೆ ನಡೆಯುತ್ತದೆ.

ಗ್ರೇಟ್ ಹಾಲ್ ಆಫ್ ದ ಪೀಪಲ್‌ನಲ್ಲಿ ನಡೆದ ಕಾಂಗ್ರೆಸ್‌ನಲ್ಲಿ 2,350ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಿದ್ದರು.

ಜಿನ್‌ಪಿಂಗ್ ಜೊತೆಗೆ ಪ್ರಧಾನಿ ಲಿ ಕೆಕಿಯಾಂಗ್ (62) ಕೂಡ ಐದು ವರ್ಷಗಳ ಎರಡನೆ ಅವಧಿಗೆ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ.

ಚೀನಾ ಸಂವಿಧಾನಕ್ಕೆ ಜಿನ್‌ಪಿಂಗ್ ಸಿದ್ಧಾಂತ ಸೇರ್ಪಡೆ: ಐತಿಹಾಸಿಕ ನಾಯಕರ ಸಾಲಿಗೆ ಚೀನಾ ಅಧ್ಯಕ್ಷ

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ರ ರಾಜಕೀಯ ಸಿದ್ಧಾಂತವೊಂದನ್ನು ಕಮ್ಯುನಿಸ್ಟ್ ಪಕ್ಷದ ಸಂವಿಧಾನದಲ್ಲಿ ಅವರ ಹೆಸರಿನಲ್ಲೇ ಸೇರಿಸಲಾಗಿದ್ದು, ಇದರಿಂದಾಗಿ ಜಿನ್‌ಪಿಂಗ್ ಚೀನಾದದ ಐತಿಹಾಸಿಕ ನಾಯಕರಾದ ಮಾವೊ ಝೆಡಾಂಗ್ ಮತ್ತು ಡೆಂಗ್ ಕ್ಸಿಯಾವೊಪಿಂಗ್‌ರ ಸಾಲಿಗೆ ಸೇರಿದಂತಾಗಿದೆ.

‘ಹೊಸ ಕಾಲಕ್ಕಾಗಿ ಚೀನಾದ ಅಂಶಗಳನ್ನು ಒಳಗೊಂಡ ಸಮಾಜವಾದ: ಕ್ಸಿ ಜಿನ್‌ಪಿಂಗ್ ಚಿಂತನೆ’ ಎಂಬ ಅಧ್ಯಾಯವನ್ನು ಕಮ್ಯುನಿಸ್ಟ್ ಪಕ್ಷದ ಸಂವಿಧಾನಕ್ಕೆ ಸೇರಿಸಲಾಯಿತು ಹಾಗೂ ಇದನ್ನು ಕಾಂಗ್ರೆಸ್ ಅನುಮೋದಿಸಿತು.

30 ವರ್ಷಗಳ ಅವಧಿಯಲ್ಲಿ ಕ್ಸಿ ಜಿನ್‌ಪಿಂಗ್ ಚೀನಾದ ಅತ್ಯಂತ ಪ್ರಬಲ ನಾಯಕರಾಗಿ ಹೊರಹೊಮ್ಮಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News