ಮಲಯಾಳಂನ ಜನಪ್ರಿಯ ನಿರ್ದೇಶಕ ಐವಿ ಶಶಿ ನಿಧನ
Update: 2017-10-24 22:37 IST
ಕೊಚ್ಚಿ, ಅ. 24: ಮಲಯಾಳಂ ಸಿನೆಮಾ ರಂಗದ ಜನಪ್ರಿಯ ನಿರ್ದೇಶಕ ಐವಿ ಶಶಿ ಚೆನ್ನೈಯಲ್ಲಿ ಗುರುವಾರ ನಿಧರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು. ಅವರು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಶಶಿಯವರ ಪತ್ನಿ ಸೀಮಾ ಪುತ್ರ ಅನಿ ಹಾಗೂ ಪುತ್ರಿ ಅನು ಅವರನ್ನು ಅಗಲಿದ್ದಾರೆ.
ಕಳೆದ ಮೂರು ದಶಕಗಳ ವೃತ್ತಿಜೀವನದಲ್ಲಿ ಅವರು 150 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕಳಿಯಲ್ಲ ಕಲ್ಯಾಣಂ (1968) ಚಿತ್ರದಲ್ಲಿ ಶಶಿ ಅವರು ಕಲಾ ನಿರ್ದೇಶಕರಾಗಿ ತನ್ನ ವೃತ್ತಿ ಜೀವನ ಆರಂಭಿಸಿದರು. ಉತ್ಸವ (1975) ಅವರ ನಿರ್ದೇಶಿಸಿದ ಮೊದಲ ಚಿತ್ರ.
‘ಆರೂಡಂ’ (1982) ನಿರ್ದೇಶನಕ್ಕಾಗಿ ರಾಷ್ಟ್ರಪ್ರಶಸ್ತಿ ಹಾಗೂ ಇನ್ನೆರೆಡು ಚಿತ್ರ ನಿರ್ದೇಶನಕ್ಕಾಗಿ ಅವರು ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಅವರ ‘ದೇವಾಸುರಂ’, ‘ಆಳ್‌ಕೂಟತ್ತಿಲ್ ಥನಿಯೆ’, ‘ಅಡಿಯೋಳುಕುಕಲ್’, ‘ಅಥಿರತ್ರಾಂ’ ಮೊದಲಾದ ಚಿತ್ರಗಳು ಸೂಪರ್ ಹಿಟ್ ಆಗಿವೆ.