×
Ad

ಚೀನಾ ಗಡಿಯಲ್ಲಿ ನಿಯೋಜನೆಗೆ ಅತ್ಯಾಧುನಿಕ ವಾಹನ, ಸಾಮಗ್ರಿ

Update: 2017-10-24 22:49 IST

ಗ್ರೇಟರ್‌ನೋಯ್ಡ, ಆ. 24: ಇಂಡೋ-ಟಿಬೇಟನ್ ಬಾರ್ಡರ್ ಪೊಲೀಸ್ (ಐಟಿಬಿಪಿ)ನ 56ನೇ ಉದಯ ದಿನಾಚರಣೆ ಹಿನ್ನೆಲೆಯಲ್ಲಿ ಇಂದಿಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರ್ವತ ಹೋರಾಟ ಪಡೆ ತಾನು ಹೊಂದಿರುವ ನೂತನ ಸೇನಾ ಟ್ರಕ್, ಸ್ಪೋರ್ಟ್ಸ್ ಯುಟಿಲಿಟಿ ವಾಹನ, ಎಲ್ಲ ಪ್ರದೇಶದಲ್ಲಿ ಚಲಿಸಬಲ್ಲ ವಾಹನ, ಹಿಮ ಸ್ಕೂಟರ್, ಬೈಕ್, ಮೊಬೈಲ್ ಸಂವಹನ ಘಟಕ, ಉತ್ಖನನ ಸಾಧನ ಹಾಗೂ ಇತರ ಸಾಧನಗಳನ್ನು ಪ್ರದರ್ಶಿಸಿತು.

ಗೃಹ ಸಚಿವ ರಾಜ್‌ನಾಥ್ ಸಿಂಗ್ ಅತಿಥಿಯಾಗಿ ಪಾಲ್ಗೊಂಡರು ಹಾಗೂ ಇಂಡೋ-ಟಿಬೇಟನ್ ಬಾರ್ಡರ್ ಪೊಲೀಸ್‌ನ ಸೆಲ್ಯೂಟ್ ಸ್ವೀಕರಿಸಿದರು.

ತನ್ನ ಮುಂಚೂಣಿಯ 3,448 ಕಿ.ಮೀ. ಗುಂಟ ಐಟಿಬಿಪಿಯ ಅತೀ ಎತ್ತರದ ಗಡಿ ಹೊರಠಾಣೆಯಲ್ಲಿ ಹಿಮ ಸ್ಕೂಟರ್ ನಿಯೋಜನೆಗೆ ಇತ್ತೀಚೆಗೆ ಕೇಂದ್ರ ಗೃಹ ಸಚಿವಾಲಯ ಇತ್ತೀಚೆಗೆ ಅನುಮೋದನೆ ನೀಡಿದ ಬಳಿಕ, ಅರೆಸೇನಾ ಪಡೆಯ ಸಮರ ಘಟಕದ ಸಾಮರ್ಥ್ಯ ಹೆಚ್ಚಿಸಲು ನಿರ್ಧರಿಸಲಾಯಿತು.

 ಇದುವರೆಗೆ ಗೃಹ ಸಚಿವಾಲಯದ ಅಡಿಯಲ್ಲಿ ಬರುವ ಭಾರತ-ಪಾಕ್ ಗಡಿಯಲ್ಲಿ ಕಾಯುತ್ತಿರುವ ಗಡಿ ಭದ್ರತಾ ಪಡೆಗೆ (ಬಿಎಸ್‌ಎಫ್) ಮಾತ್ರ ಪಿರಂಗಿ ಘಟಕ ಹಾಗೂ ಯಾಂತ್ರೀಕೃತ ಘಟಕಗಳನ್ನು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News