×
Ad

ಲಿಮ್ಕಾ ಬುಕ್ ಆಫ್ ರೆಕಾರ್ಡ್‌ಗೆ ಸೇರಿದ ಮೇಘಾಲಯ ಚುನಾವಣಾ ಇಲಾಖೆ

Update: 2017-10-24 23:22 IST

 ಶಿಲ್ಲಾಂಗ್, ಅ. 21: ರಾಜ್ಯದಲ್ಲಿ ಯುವ ಮತದಾರರನ್ನು ಬಳಸಿ ಅತಿ ದೊಡ್ಡ ಮಾನವ ಲೋಗೊ ರೂಪಿಸುವ ಮೂಲಕ ಮೇಘಾಲಯ ಚುನಾವಣಾ ಇಲಾಖೆ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ಗೆ ಪ್ರವೇಶ ಪಡೆದಿದೆ.

ಜವಾಹರ್‌ಲಾಲ್ ನೆಹರೂ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಜುಲೈಯಲ್ಲಿ ಆಯೋಜಿಸಲಾಗಿದ್ದ 18ರಿಂದ 21 ವರ್ಷ ಒಳಗಿನ ಯುವಜನರು ಹಾಗೂ ಬಿಟ್ಟು ಹೋದ ಮತದಾರರನ್ನು ಮತಪಟ್ಟಿಗೆ ಸೇರಿಸುವ ಅಭಿಯಾನ ಮಿಶನ್ ಯೂನಿಟ್‌ನ ಒಂದು ಭಾಗವಾಗಿ ಈ ಮಾನವ ಲೋಗೊ ರೂಪಿಸಲಾಗಿತ್ತು.

ಶಾಲೆ, ನೋಡೆಲ್ ಬೋಧಕರ ಜಾಲ ಹಾಗೂ ಚುನಾವಣಾ ಅಧಿಕಾರಿಗಳ ಪ್ರಯತ್ನಕ್ಕೆ ಈ ಫಲ ದೊರಕಿದೆ. ಮುಖ್ಯವಾಗಿ ಇದರಲ್ಲಿ ಪಾಲ್ಗೊಂಡ ಯುವ ಮತದಾರರಿಗೆ ಈ ಗೌರವ ಸಲ್ಲಬೇಕು. ಚುನಾವಣಾ ಪ್ರಕ್ರಿಯೆಯಲ್ಲಿ ಯುವ ಮತದಾರರು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಮೇಘಾಲಯದ ಮುಖ್ಯ ಚುನಾವಣಾ ಆಯುಕ್ತ ಫೆಡ್ರಿಕ್ ರೋಯ್ ಖಾರ್ಕೋಂಗೋರ್ ತಿಳಿಸಿದ್ದಾರೆ.

ಅತ್ಯಧಿಕ ಸಂಖ್ಯೆಯಲ್ಲಿ ಯುವ ಮತದಾರರು ಮತಪಟ್ಟಿಯಲ್ಲಿ ನೋಂದಣಿ ಮಾಡಿ ಒಂದೇ ಸ್ಥಳದಲ್ಲಿ ಅತೀ ದೊಡ್ಡ ಮಾನವ ಲೋಗೋ ರೂಪಿಸಿರುವುದಕ್ಕೆ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನ ಅಧಿಕಾರಿ ಗರಿಮಾ ಮೆನನ್ ಅವರು ಖಾರ್ಕೋಗೋರ್ ಅವರನ್ನು ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News