ರಾಜಸ್ತಾನದ ವಿವಾದಾತ್ಮಕ ಆಧ್ಯಾದೇಶ ವಿಧಾನ ಸಭೆಯ ಆಯ್ಕೆ ಸಮಿತಿಗೆ
ಜೈಪುರ, ಆ. 24: ನ್ಯಾಯಾಧೀಶರು ಹಾಗೂ ಸರಕಾರಿ ಅಧಿಕಾರಿಗಳ ವಿಚಾರಣೆಗೆ ಪೂರ್ವಭಾವಿ ಅನುಮತಿ ಪಡೆಯುವ ವಿವಾದಾತ್ಮಕ ಮಸೂದೆಯನ್ನು ರಾಜಸ್ತಾನ ಸರಕಾರ ಮಂಗಳವಾರ ವಿಧಾನ ಸಭೆಯ ಆಯ್ಕೆ ಸಮಿತಿಗೆ ಕಳುಹಿಸಿಕೊಟ್ಟಿದೆ.
ಸೆಪ್ಟಂಬರ್ 7ರಂದು ಘೋಷಿಸಿದ ಆಧ್ಯಾದೇಶದ ಬದಲಿಗೆ ನಿನ್ನೆ ವಿಧಾನ ಸಭೆಯಲ್ಲಿ ವಿರೋಧ ಪಕ್ಷ ಕಾಂಗ್ರೆಸ್‌ನ ವಿರೋಧದ ನಡುವೆಯೂ ಗೃಹ ಸಚಿವ ಗುಲಾಬ್‌ಚಂದ್ ಕಟಾರಿಯಾ ಕ್ರಿಮಿನಲ್ ಕಾನೂನ (ರಾಜಸ್ತಾನ ತಿದ್ದುಪಡಿ)ನ್ನು ಮಂಡಿಸಿದರು.
ಮಸೂದೆ ಕುರಿತು ಚರ್ಚಿಸಲು ಮುಖ್ಯಮಂತ್ರಿ ವಸುಂಧರಾ ರಾಜೆ ನಿನ್ನೆ ರಾತ್ರಿ ಸಭೆ ನಡೆಸಿದ್ದಾರೆ ಎಂದು ಪ್ರಶ್ನೋತ್ತರ ವೇಳೆಯ ಆರಂಭದಲ್ಲಿ ಸಂಸದೀಯ ವ್ಯವಹಾರಗಳ ಸಚಿವ ರಾಜೇಂದ್ರ ರಾಥೋಡ್ ಸದನಕ್ಕೆ ಮಾಹಿತಿ ನೀಡಿದರು.
ಸೆಪ್ಟಂಬರ್‌ನಲ್ಲಿ ಆಧ್ಯಾದೇಶ ಹೊರಡಿಸುವ ಮೊದಲು ರಾಷ್ಟ್ರಪತಿ ಅವರ ಅನುಮತಿ ಕೋರಲಾಗಿತ್ತು ಎಂದು ಗೃಹ ಸಚಿವರು ತಿಳಿಸಿದ್ದರು. ಆದರೆ, ಆಧ್ಯಾದೇಶದೊಂದಿಗೆ ರಾಷ್ಟ್ರಪತಿ ಅವರ ಅನುಮತಿ ಲಗತ್ತಿಸಿಲ್ಲ ಎಂದು ಎಂದು ನಿನ್ನೆ ಸ್ವತಂತ್ರ ಶಾಸಕ ಮಾಣಿಕ್ ಚಂದ್ ಸುರಾನಾ ಹೇಳಿದ್ದರು.
ಈ ಮಸೂದೆ ಹಿಂದೆ ಪಡೆಯುವಂತೆ ಆಗ್ರಹಿಸಿ ವಿರೋಧ ಪಕ್ಷದ ಶಾಸಕರು ಸದನದ ಬಾವಿಗೆ ಇಳಿಯುತ್ತಿದ್ದಂತೆ ಕಠಾರಿಯಾ, ಸದಸ್ಯರು ನೀಡಿದ ಸಲಹೆಯನ್ನು ಸರಕಾರ ಪರಿಶೀಲಿಸಲಿದೆ ಎಂದರು.