ಪಂಚಕುಲ ಹಿಂಸಾಚಾರ ಪೂರ್ವನಿಯೋಜಿತ : ವಿಶೇಷ ಪೊಲೀಸ್ ತಂಡ
ಚಂಡಿಗಢ, ಅ. 24: ಡೇರಾ ಮುಖ್ಯಸ್ಥ ಬಾಬಾ ಗುರ್ಮೀತ್ ಬಂಧನದ ಸಂದರ್ಭ ಪಂಚಕುಲದಲ್ಲಿ ನಡೆದ ಹಿಂಸಾಚಾರ ಪೂರ್ವ ಯೋಜಿತವಾಗಿತ್ತು ಎಂದು ತನಿಖೆ ನಡೆಸಿರುವ ಹರ್ಯಾಣ ಪೊಲೀಸ್‌ನ ವಿಶೇಷ ತನಿಖಾ ತಂಡ ಹೇಳಿದೆ.
ಎರಡು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಬಾಬಾ ಗುರ್ಮೀತ್‌ಗೆ ನ್ಯಾಯಾಲಯ ದೋಷಿ ಎಂದು ನ್ಯಾಯಲಯ ಪರಿಗಣಿಸಿದ ದಿನವಾದ ಆಗಸ್ಟ್ 25ರಂದು ಪಂಚಕುಲದಲ್ಲಿ ಹಿಂಸಾಚಾರ ನಡೆದಿತ್ತು. ಈ ಹಿಂಸಾಚಾರಕ್ಕೆ ಮುನ್ನ ಆಗಸ್ಟ್ 17ರಂದು ಸಿರ್ಸಾದ ಡೇರಾ ಕೇಂದ್ರ ಕಚೇರಿಯಲ್ಲಿ ಸಭೆ ನಡೆದಿತ್ತು ಎಂದು ಸಿಟ್ ಹೇಳಿದೆ.
ಆರೋಪಿಗಳ ಮೊಬೈಲ್ ನೆಲೆ ಗಮನಿಸಿದಾಗ ಇದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಭೆ ಹನಿಪ್ರೀತ್ ನೇತೃತ್ವದಲ್ಲಿ ನಡೆದಿದೆ ಹಾಗೂ ಆದಿತ್ಯ ಇನ್ಸಾನ್ ಹಾಗೂ ಗೋಪಾಲ್ ಇನ್ಸಾನ್ ಸೇರಿದಂತೆ 20ರಿಂದ 45 ಸದಸ್ಯರು ಪಾಲ್ಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ನಡುವೆ ಡೇರಾದ ಬಂಧಿತ ಚಾರ್ಟರ್ಡ್ ಅಕೌಂಟೆಂಟ್ ಸಿಪಿ ಅರೋರಾ ವಿಚಾರಣೆ ವೇಳೆ, ಬಾಬಾ ಗುರ್ಮೀತ್ ಆಸ್ತಿ ಹಾಗೂ ವಿದೇಶಿ ಹೂಡಿಕೆ ಬಗ್ಗೆ ಮಾಹಿತಿ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ.