ಅಮೆರಿಕ ವಿರುದ್ಧ ಭಾರತಕ್ಕೆ 22-0 ಅಂತರದಲ್ಲಿ ಭರ್ಜರಿ ಜಯ
ಜೊಹೊರ್ ಬಹ್ರು, ಅ.25: ಇಲ್ಲಿ ನಡೆಯುತ್ತಿರುವ ಸುಲ್ತಾನ್ ಆಫ್ ಜೊಹೊರ್ ಕಪ್ ಹಾಕಿ ಟೂರ್ನಮೆಂಟ್‌ನ ತನ್ನ 3ನೆ ಪಂದ್ಯದಲ್ಲಿ ಅಮೆರಿಕ ವಿರುದ್ಧ ಭಾರತ 22-0 ಅಂತರದಲ್ಲಿ ಭರ್ಜರಿ ಜಯ ಗಳಿಸಿದೆ. ಭಾರತದ ವಿಶಾಲ್ ಅಂಟಿಲ್, ದಿಲ್‌ಪ್ರೀತ್ ಸಿಂಗ್, ಹರ್ಮನ್‌ಜಿತ್ ಸಿಂಗ್ ಮತ್ತು ಅಭಿಷೇಕ್ ಹ್ಯಾಟ್ರಿಕ್ ಗೋಲುಗಳನ್ನು ದಾಖಲಿಸಿದರು.
ಹರ್ಮನ್‌ಜಿತ್ ತಂಡದ ಪರ ಗರಿಷ್ಠ 5 ಗೋಲು ಗಳಿಸಿದರು. ಅಭಿಷೇಕ್ 4 ಗೋಲು, ವಿಶಾಲ್ ಮತ್ತು ದಿಲ್‌ಪ್ರೀತ್ ತಲಾ 3 ಗೋಲುಗಳನ್ನು ತಂಡದ ಖಾತೆಗೆ ಜಮೆ ಮಾಡಿದರು.
ಮಣಿಂದರ್ ಸಿಂಗ್ 2 ಗೋಲು, ಪ್ರತಾಪ್ ಲಕ್ರಾ, ರವಿಚಂದ್ರ ಮೊಯಿರಾಂಗ್ಟೆಮ್ , ರೌಶನ್ ಕುಮಾರ್, ಶಿಲಾನಂದ ಲಕ್ರಾ ಮತ್ತು ವಿವೇಕ್ ಪ್ರಸಾದ್ ತಲಾ 1 ಗೋಲು ದೊರಕಿಸಿಕೊಟ್ಟರು.
ಭಾರತ ಮೊದಲ ಪಂದ್ಯದಲ್ಲಿ ಜಪಾನ್ ವಿರುದ್ಧ 3-2 ಅಂತರದಲ್ಲಿ ಜಯ ಗಳಿಸಿತ್ತು. ಎರಡನೆ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ 2-1 ಅಂತರದಲ್ಲಿ ಜಯ ಸಾಧಿಸಿತ್ತು. ಭಾರತ ಗುರುವಾರದ ಪಂದ್ಯದಲ್ಲಿ ಆಸ್ಟ್ರೇಲಿಯ ಮತ್ತು ಅಂತಿಮ ಪಂದ್ಯದಲ್ಲಿ ಗ್ರೇಟ್ ಬ್ರಿಟನ್‌ನ್ನು ಎದುರಿಸಲಿದೆ.