ಆಳ್ವಾಸ್ ನುಡಿಸಿರಿ-2017: ಹೊಸ ಕೃತಿಗಳ ಬಿಡುಗಡೆಗೆ ಆಹ್ವಾನ

Update: 2017-10-27 04:48 GMT

ಮೂಡುಬಿದಿರೆ, ಅ.27: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ನಾಡು-ನುಡಿ-ಸಂಸ್ಕೃತಿಯ ಹಬ್ಬ ‘ಆಳ್ವಾಸ್ ನುಡಿಸಿರಿ 2017’ 14ನೇವರ್ಷಾಚರಣೆಯಾಗಿದ್ದು, ಈ ಸಂದರ್ಭ ಕನ್ನಡದ 14 ಪುಸ್ತಕಗಳ ಬಿಡುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಬಿಡುಗಡೆಯ ಪುಸ್ತಕವು ಕನ್ನಡ ಸೃಜನಶೀಲ ಸಾಹಿತ್ಯದ ಯಾವುದೇ ಪ್ರಕಾರದ ಕೃತಿಯಾಗಿದ್ದು ಮೊದಲ ಪ್ರಕಟನೆಯಾಗಿರಬೇಕು. ಮರುಪ್ರಕಟನೆಗೆ ಅವಕಾಶವಿಲ್ಲ.

ಕೃತಿಯು ಕನಿಷ್ಠ 150 ಪುಟಗಳನ್ನು ಹೊಂದಿದ್ದು, ವೌಲಿಕ ಕೃತಿಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು. ಆಯ್ಕೆಯ ಜವಾಬ್ದಾರಿ ಸಂಪೂರ್ಣ ಆಯ್ಕೆ ಸಮಿತಿಯದ್ದಾಗಿದ್ದು, ಈ ಸಂಬಂಧ ಯಾವುದೇ ವ್ಯವಹಾರಕ್ಕೆ ಅವಕಾಶವಿರುವುದಿಲ್ಲ. ಆಯ್ಕೆಯಾದ ಕೃತಿಗೆ ರೂ.8,000 ಗೌರವಧನ ನೀಡಲಾಗುವುದು. ಆಸಕ್ತರು ನವೆಂಬರ್ 5ರೊಳಗೆ ಮೊ.ಸಂ.: 9663180107 ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News