×
Ad

ಕ್ರಿಕೆಟಿಗರನ್ನು ಡೋಪ್ ಟೆಸ್ಟ್‌ಗೊಳಪಡಿಸಲು ಕೇಂದ್ರ ಕ್ರೀಡಾ ಇಲಾಖೆಯಿಂದ ನಾಡಾಕ್ಕೆ ಸೂಚನೆ

Update: 2017-10-29 18:34 IST

ಹೊಸದಿಲ್ಲಿ, ಅ.29: ಬಿಸಿಸಿಐ ಭಾರತದಲ್ಲಿ ಆಯೋಜಿಸುವ ಎಲ್ಲ ದೇಶಿಯ ಮತ್ತು ಅಂತಾರಾಷ್ಟ್ರೀಯ ಟೂರ್ನಮೆಂಟ್ ಮತ್ತು ಪಂದ್ಯಗಳಲ್ಲಿ ಭಾಗವಹಿಸುವ ಎಲ್ಲ ಭಾರತದ ಕ್ರಿಕೆಟಿಗರನ್ನು ಉದ್ದೀಪನಾ ಮದ್ದು ಪರೀಕ್ಷೆಗೊಳಪಡಿಸುವಂತೆ ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟಕಕ್ಕೆ (ನಾಡಾ) ಕೇಂದ್ರ ಕ್ರೀಡಾ ಇಲಾಖೆ ಸೂಚಿಸಿದೆ.

ಕೇಂದ್ರ ಕ್ರೀಡಾ ಕಾರ್ಯದರ್ಶಿ ರಾಹುಲ್ ಭಟ್ನಾಗರ್ ಅವರು ನಾಡಾದ ಮಹಾ ನಿರ್ದೇಶಕರಾದ ನವೀನ್ ಅಗರವಾಲ್ ಈ ಸಂಬಂಧ ಸೂಚನೆ ನೀಡಿದ್ದಾರೆ.

  ಬಿಸಿಸಿಐ ನಡೆಸುವ ಎಲ್ಲ ಟೂರ್ನಮೆಂಟ್ ಮತ್ತು ಪಂದ್ಯಗಳಿಗೆ ಉದ್ದೀಪನಾ ಮದ್ದು ನಿಗ್ರಹ ಅಧಿಕಾರಿಗಳನ್ನು ಕಳುಹಿಸಿ ಆಟಗಾರರ ಮೂತ್ರ ಮತ್ತು ರಕ್ತದ ಮಾದರಿಯನ್ನು ಸಂಗ್ರಹಿಸಲು ನಾಡಾಕ್ಕೆ ಕೇಂದ್ರ ಕ್ರೀಡಾ ಸಚಿವಾಲಯವು ಪೂರ್ಣ ಅಧಿಕಾರ ನೀಡಿದೆ.

 ಇದಕ್ಕೂ ಮೊದಲು ವಿಶ್ವ ಉದ್ದೀಪನಾ ನಿಗ್ರಹ ಘಟಕ(ವಾಡಾ) ಆಟಗಾರರನ್ನು ಉದ್ದೀಪನಾ ಮದ್ದು ಪರೀಕ್ಷೆಗೆ ಒಳಪಡಿಸಲು ನಾಡಾಕ್ಕೆ ಸಮ್ಮತಿ ನೀಡಲು ಬಿಸಿಸಿಐಗೆ ಸೂಚಿಸುವಂತೆ ಐಸಿಸಿಗೆ ಮನವಿ ಮಾಡಿತ್ತು. ಒಂದು ವೇಳೆ ಅನುಮತಿ ನೀಡದಿದ್ದರೆ ನಾಡಾ ಮಾನ್ಯತೆಯನ್ನು ರದ್ದುಪಡಿಸುವ ಎಚ್ಚರಿಕೆಯನ್ನು ವಾಡಾ ನೀಡಿತ್ತು.

ನಾಡಾ ರಣಜಿ ಟ್ರೋಫಿ ಟೂರ್ನಮೆಂಟ್‌ನಲ್ಲಿ ಆಟಗಾರರನ್ನು ಡೋಪಿಂಗ್ ಪರೀಕ್ಷೆಗೊಳಪಡಿಸಲಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News