ಬ್ರಹ್ಮಘಾಟ್ ನಲ್ಲಿ ಗಮನಸೆಳೆದ ರಂಗುರಂಗಿನ ತಾಜ್ ಮಹಲ್ ರಂಗೋಲಿ

Update: 2017-10-29 16:42 GMT

ಹೊಸದಿಲ್ಲಿ, ಅ.29: ತಾಜ್ ಮಹಲ್ ಬಗ್ಗೆ ವಿವಾದಗಳನ್ನು ಸೃಷ್ಟಿಸುವವರಿಗೆ ಸೂಕ್ತ ಪ್ರತಿಕ್ರಿಯೆ ಎಂಬಂತೆ ಪುಷ್ಕರ್ ನ ವಿದ್ಯಾರ್ಥಿಗಳು ಬ್ರಹ್ಮಘಾಟ್ ನಲ್ಲಿ ನಡೆದ ದೀಫ್ ದನ್ ಕಾರ್ಯಕ್ರಮದಲ್ಲಿ ತಾಜ್ ಮಹಲ್ ನ ರಂಗೋಲಿಯೊಂದನ್ನು ರಚಿಸುವ ಮೂಲಕ ಗಮನಸೆಳೆದಿದ್ದಾರೆ.

ಪ್ರಗ್ಯಾ ಬಾಲ ನಿಕೇತನದ 8 ಹಾಗು 9ನೆ ತರಗತಿಯ ವಿದ್ಯಾರ್ಥಿಗಳು ತಾಜ್ ಮಹಲ್ ನ ಬಣ್ಣದ ರಂಗೋಲಿ ಬಿಡಿಸಿ ದೀಪಗಳನ್ನು ಹಚ್ಚಿದ್ದಾರೆ.

ಸಂಗೀತ್ ಸೋಮ್ ಹಾಗು ವಿನಯ್ ಕಟಿಯಾರ್ ರಂತಹ ಉತ್ತರ ಪ್ರದೇಶದ ಬಿಜೆಪಿ ನಾಯಕರು ತಾಜ್ ಮಹಲ್ ಬಗ್ಗೆ ನೀಡಿದ್ದ ಹೇಳಿಕೆಗಳು ಈ ಹಿಂದೆ ಭಾರೀ ವಿವಾದಗಳನ್ನೇ ಸೃಷ್ಟಿಸಿತ್ತು.

“ಈ ಪ್ರೇಮದ ಸಂಕೇತಕ್ಕೆ ಹಿಂದಿನಿಂದಲೇ ಜನರು ಆಕರ್ಷಿತರಾಗುತ್ತಿದ್ದಾರೆ. ಇದು ದೇಶ, ಧರ್ಮ, ಜಾತಿಯ ಗಡಿಗಳನ್ನು ಮೀರಿದ್ದಾಗಿದೆ” ಎಂದು 8ನೆ ತರಗತಿಯ ವಿದ್ಯಾರ್ಥಿನಿ ಪ್ರಿಯಾಂಕ ಹೇಳಿದ್ದಾರೆ.

“ನಮ್ಮ ರಂಗೋಲಿಯ ವಿಷಯವಾಗಿ ನಾವು ತಾಜ್ ಮಹಲನ್ನು ಆಯ್ಕೆ ಮಾಡಿಕೊಂಡೆವು. ಏಕೆಂದರೆ ಈ ಮೂಲಕ ನಾವು ವಿಶ್ವದ ಪ್ರತಿ ಧರ್ಮದ ಮೂಲವಾದ ಪ್ರೀತಿಯ ಸಂದೇಶವನ್ನು ಪಸರಿಸಲು ಬಯಸುತ್ತೇವೆ” ಎಂದು ಮತ್ತೋರ್ವ ವಿದ್ಯಾರ್ಥಿ ಏಕಲವ್ಯ ಹೇಳುತ್ತಾರೆ,

ಒಟ್ಟಿನಲ್ಲಿ ವಿಶ್ವಪ್ರಸಿದ್ಧ ಸ್ಮಾರಕವೊಂದರ ಬಗ್ಗೆ ನಾಯಕರೆನಿಸಿಕೊಂಡವರೇ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವ ನಡುವೆ ವಿದ್ಯಾರ್ಥಿಗಳ ಈ ಪ್ರಯತ್ನ ಅಭಿನಂದನಾರ್ಹ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News