ಐಸಿಸಿ ಮಹಿಳಾ ಕ್ರಿಕೆಟ್ ರ‍್ಯಾಂಕಿಂಗ್‌: ಮಿಥಾಲಿ ರಾಜ್ ನಂ.1

Update: 2017-10-30 18:19 GMT

ದುಬೈ, ಅ.30: ಭಾರತದ ನಾಯಕಿ ಮಿಥಾಲಿ ರಾಜ್ ಐಸಿಸಿ ಏಕದಿನ ಮಹಿಳಾ ಕ್ರಿಕೆಟ್ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನವನ್ನು ಅಲಂಕರಿಸಿದ್ದಾರೆ.

ಆಸ್ಟ್ರೇಲಿಯದ ಎಲ್ಲಿಸ್ ಪೆರ್ರಿ ಹಾಗೂ ನ್ಯೂಝಿಲೆಂಡ್‌ನ ಆ್ಯಮಿ ಸಾಟ್ಟರ್ಥ್‌ವೈಟ್ ಒಂದು ಸ್ಥಾನ ಭಡ್ತಿ ಪಡೆದು ಕ್ರಮವಾಗಿ ಎರಡನೆ ಹಾಗೂ ಮೂರನೆ ಸ್ಥಾನ ಪಡೆದರು. ಆಸ್ಟ್ರೇಲಿಯದ ಮೆಗ್ ಲ್ಯಾನ್ನಿಂಗ್ ನಂ.1 ಸ್ಥಾನದಿಂದ ನಾಲ್ಕನೆ ಸ್ಥಾನಕ್ಕೆ ಕುಸಿದಿದ್ದಾರೆ. ಲ್ಯಾನ್ನಿಂಗ್ ಗಾಯದ ಸಮಸ್ಯೆಯಿಂದಾಗಿ ಇಂಗ್ಲೆಂಡ್ ವಿರುದ್ಧ ಸರಣಿಯಿಂದ ಹೊರಗುಳಿದಿದ್ದ ಕಾರಣ ರ‍್ಯಾಂಕಿಂಗ್‌ನಲ್ಲಿ ಕುಸಿತ ಕಂಡಿದ್ದಾರೆ. ಮಿಥಾಲಿ 753 ಅಂಕ ಗಳಿಸಿದ್ದರೆ, ಪೆರ್ರಿ ಹಾಗೂ ಸಾಟ್ಟರ್ಥ್‌ವೈಟ್ ಕ್ರಮವಾಗಿ 725 ಹಾಗೂ 720 ಅಂಕ ಗಳಿಸಿದ್ದಾರೆ. ಮಹಿಳಾ ಬೌಲರ್‌ಗಳ ಪೈಕಿ ಭಾರತದ ಜುಲಾನ್ ಗೋಸ್ವಾಮಿ 652 ಅಂಕವನ್ನು ಗಳಿಸಿ ಎರಡನೆ ಸ್ಥಾನ ಪಡೆದರು. ದಕ್ಷಿಣ ಆಫ್ರಿಕದ ಮರಿಝಾನೆ ಕಾಪ್(656) ಮೊದಲ ಸ್ಥಾನದಲ್ಲಿದ್ದಾರೆ. ಐಸಿಸಿ ಮಹಿಳಾ ಚಾಂಪಿಯನ್‌ಶಿಪ್‌ನಲ್ಲಿ ಇಂಗ್ಲೆಂಡ್‌ನ ವಿರುದ್ಧ 2-1 ಅಂತರದಿಂದ ಜಯ ಸಾಧಿಸಿರುವ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ನಾಲ್ಕು ಅಂಕವನ್ನು ಗಳಿಸಿದ್ದಲ್ಲದೆ ಮಹಿಳಾ ಟೀಮ್ ರ‍್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನ ವಶಪಡಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News