ಹಿಮಾಚಲ ಪ್ರದೇಶ ಚುನಾವಣೆ: ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಪ್ರೇಮ್ ಕುಮಾರ್ ಧುಮಾಲ್

Update: 2017-10-31 12:21 GMT

ಹೊಸದಿಲ್ಲಿ, ಅ.31: ಮುಂಬರುವ ಹಿಮಾಚಲ ಪ್ರದೇಶ ಚುನಾವಣೆಗೆ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಪ್ರೇಮ್ ಕುಮಾರ್ ಧುಮಾಲ್ ಅವರ ಹೆಸರನ್ನು ಬಿಜೆಪಿ ಘೋಷಿಸಿದೆ.

1998ರಿಂದ 2003 ಹಾಗು 2008ರಿಂದ 2012ರವರೆಗೆ ಧುಮಾಲ್ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದವರು. ಪ್ರಸ್ತುತ ಅವರು  ರಾಜ್ಯ ವಿಧಾನಸಭೆಯಲ್ಲಿ ವಿಪಕ್ಷ ನಾಯಕರಾಗಿದ್ದಾರೆ.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿಯಾಗಿ ಧುಮಾಲ್ ಅವರ ಹೆಸರನ್ನು ಅಮಿತ್ ಶಾ ಇಂದು ಘೋಷಿಸಿದ್ದಾರೆ.

“ಪ್ರೇಮ್ ಕುಮಾರ್ ಧುಮಾಲ್ ರ ನಾಯಕತ್ವದಡಿಯಲ್ಲಿ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಬಿಜೆಪಿ ಎದುರಿಸಲಿದೆ. ಈಗ ಅವರು ಮಾಜಿ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಡಿಸೆಂಬರ್ 18ರ ನಂತರ ನೂತನ ಮುಖ್ಯಮಂತ್ರಿಯಾಗಿಲಿದ್ದಾರೆ” ಎಂದು ಅಮಿತ್ ಶಾ ಇದೇ ಸಂದರ್ಭ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News