×
Ad

ಸೆಕ್ಸ್ ಸಿಡಿ ಹಗರಣ: ಪತ್ರಕರ್ತ ವಿನೋದ್ ವರ್ಮಾಗೆ ನ್ಯಾಯಾಂಗ ಬಂಧನ

Update: 2017-10-31 22:21 IST

ರಾಯಪುರ, ಅ. 31: ಹಿರಿಯ ಪತ್ರಕರ್ತ ವಿನೋದ್ ವರ್ಮಾ ಅವರಿಗೆ ರಾಯಪುರ ನ್ಯಾಯಾಲಯ ನವೆಂಬರ್ 13ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಸುಲಿಗೆ ಹಾಗೂ ಬ್ಲ್ಯಾಕ್‌ಮೇಲ್ ಪ್ರಕರಣಕ್ಕೆ ಸಂಬಂಧಿಸಿ ಛತ್ತೀಸ್‌ಗಢ ಪೊಲೀಸರು ಅಕ್ಟೋಬರ್ 27ರಂದು ವಿನೋದ್ ವರ್ಮಾ ಅವರನ್ನು ಉತ್ತರಪ್ರದೇಶದ ಘಾಝಿಯಾಬಾದ್‌ನ ಇಂದಿರಾಪುರಂನಲ್ಲಿರುವ ಅವರ ನಿವಾಸದಿಂದ ಬಂಧಿಸಿದ್ದರು.

ಬಂಧಿಸಿದ ಒಂದು ದಿನದ ಬಳಿಕ ಛತ್ತೀಸ್‌ಗಢ ಪೊಲೀಸರು ವರ್ಮಾ ಹಾಗೂ ಕಾಂಗ್ರೆಸ್ ಅಧ್ಯಕ್ಷ ಭೂಪೇಶ್ ಬಾಲ್ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸಿದ್ದರು.

ಛತ್ತೀಸ್‌ಗಡದ ಸಚಿವ ರಾಜೇಶ್ ಮುನಾಟ್ ಅವರ ಸೆಕ್ಸ್ ಸಿಡಿ ನನ್ನ ಬಳಿ ಇದೆ. ಅದಕ್ಕಾಗಿ ರಾಜ್ಯ ಸರಕಾರ ನನ್ನ ಬಗ್ಗೆ ಅಸಮಾಧಾನಗೊಂಡಿದೆ ಎಂದು ವಿನೋದ್ ವರ್ಮಾ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News