×
Ad

ಸರ್ದಾರ್ ವಲ್ಲಭ ಭಾಯಿ ಪಟೇಲ್ ಜನ್ಮ ದಿನಾಚರಣೆ: ಗೌರವ ನಮನ ಸಲ್ಲಿಸಿದ ಕಾಂಗ್ರೆಸ್

Update: 2017-10-31 22:27 IST

ಹೊಸದಿಲ್ಲಿ, ಅ. 31: ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ 142ನೇ ಜನ್ಮ ದಿನವಾದ ಮಂಗಳವಾರ ಕಾಂಗ್ರೆಸ್ ಪಕ್ಷ ಅವರಿಗೆ ಗೌರವ ಸಲ್ಲಿಸಿತು. ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರನ್ನು ಸ್ಮರಿಸಿದ ಕಾಂಗ್ರೆಸ್, ಸ್ವಾತಂತ್ರ್ಯದ ಬಳಿಕ ಭಾರತವನ್ನು ಏಕೀಕೃತವಾಗಿರಿಸಲು ಅವರು ಸಾಕಷ್ಟು ಶ್ರಮ ವಹಿಸಿದರು ಎಂದಿದೆ.

ಸಂಘದ ನಾಯಕರ ಮಾತುಗಳು ವಿಷಪೂರಿತ. ಇದರ ಪರಿಣಾಮ ಮಹಾತ್ಮಾ ಗಾಂಧಿ ಹತ್ಯೆ ನಡೆಯಿತು ಎಂಬ ಸಂದೇಶ ಹಾಗೂ ಪಟೇಲ್ ಅವರ ಭಾವಚಿತ್ರವನ್ನು ಕಾಂಗ್ರೆಸ್ ಪೋಸ್ಟ್ ಮಾಡಿದೆ.

ಪಟೇಲ್ ಅವರು ಭಾರತದ ಮೊದಲ ಉಪ ಪ್ರಧಾನಿ. ಅವರು ಗುಜರಾತ್‌ನ ಸಣ್ಣ ಗ್ರಾಮ ನಾಡಿಯಾಡ್‌ನಲ್ಲಿ 1875 ಅಕ್ಟೋಬರ್ 31ರಂದು ಜನಿಸಿದರು. 1950 ಡಿಸೆಂಬರ್ 15ರಂದು ಮೃತಪಟ್ಟರು.

ಉಕ್ಕಿನ ಮನುಷ್ಯ ಎಂದು ಜನಪ್ರಿಯರಾಗಿದ್ದ ಅವರು ದೇಶಕ್ಕೆ ನೀಡಿದ ಕೊಡುಗೆಗಾಗಿ 1991ರಲ್ಲಿ ಭಾರತದ ಅತ್ಯುಚ್ಛ ನಾಗರಿಕ ಪ್ರಶಸ್ತಿ ಭಾರತರತ್ನಕ್ಕೆ ಭಾಜನರಾಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News