ಚುನಾವಣಾ ದ್ವೇಷದಿಂದ ಹತ್ಯೆ: ಬಿಜೆಪಿ ಶಾಸಕ ಸಹಿತ 8 ಮಂದಿ ವಿರುದ್ಧ ಪ್ರಕರಣ ದಾಖಲು
Update: 2017-10-31 22:58 IST
ಬಾಗ್ಪಾಟ್, ಅ. 31: ಪಂಚಾಯತ್ ಚುನಾವಣೆ ದ್ವೇಷಕ್ಕೆ ಸಂಬಂಧಿಸಿ ವ್ಯಕ್ತಿಯೋರ್ವನನ್ನು ಹತ್ಯೆಗೈದ ಪ್ರಕರಣದಲ್ಲಿ ಬಿಜೆಪಿ ಶಾಸಕ ಸೇರಿದಂತೆ 8 ಮಂದಿ ವಿರುದ್ಧ ಉತ್ತರಪ್ರದೇಶ ಪೊಲೀಸರು ಪ್ರಥಮ ಮಾಹಿತಿ ವರದಿ ದಾಖಲಿಸಿದ್ದಾರೆ.
ಬಿಜೆಪಿಯ ಬಡೌತ್ ಶಾಸಕ ಕೃಷ್ಣಪಾಲ್ ಮಲ್ಲಿಕ್ ಈ ಹತ್ಯೆಯ ಪಿತೂರಿಗಾರ ಎಂದು ಆರೋಪಿಸಲಾಗಿದೆ. ಆದರೆ, ಇದು ತನ್ನ ರಾಜಕೀಯ ಗೌರವಕ್ಕೆ ಧಕ್ಕೆ ತರುವ ಪ್ರಯತ್ನ ಎಂದು ಮಲ್ಲಿಕ್ ಹೇಳಿದ್ದಾರೆ.
ಅಮಿತ್ (30) ಮೇಲೆ ಅವರ ಸಂಬಂಧಿ ಹಾಗೂ ಮಾಜಿ ಗ್ರಾಮ ಪ್ರಧಾನ್ ಆಗಿದ್ದ ರಾಮ್ ವೀರ್ ಬಾಘ್ಪಾಟ್‌ನ ಹಿಲ್ವಾಡಿ ಗ್ರಾಮದಲ್ಲಿ ದಾಳಿ ನಡೆಸಿ ಹತ್ಯೆಗೈದಿದ್ದಾರೆ. ಈ ಘಟನೆಯಲ್ಲಿ ಐದು ಮಂದಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.