×
Ad

ಸುಲಭ ವ್ಯವಹಾರದ ಅವಕಾಶ ಕಲ್ಪಿಸುವ ಅಗ್ರ 100 ರಾಷ್ಟ್ರಗಳ ಸಾಲಿಗೆ ಭಾರತ

Update: 2017-10-31 23:31 IST

ಹೊಸದಿಲ್ಲಿ, ಅ. 31: ಸುಲಭ ವ್ಯವಹಾರದ ಅವಕಾಶ ಕಲ್ಪಿಸುವ ಜಗತ್ತಿನ ಅಗ್ರ 100 ರಾಷ್ಟ್ರಗಳಲ್ಲಿ ಭಾರತ ಮೊದಲ ಬಾರಿಗೆ ಸೇರ್ಪಡೆಗೊಂಡಿದೆ. ಸುಲಭ ವ್ಯವಹಾರದ ಅವಕಾಶ ಕಲ್ಪಿಸುವ ದೇಶಗಳ ಜಾಗತಿಕ ರ್ಯಾಂಕ್‌ನಲ್ಲಿ ಭಾರತ 30 ಸ್ಥಾನಗಳ ಏರಿಕೆ ಕಂಡಿದೆ ಎಂದು ವಿಶ್ವ ಬ್ಯಾಂಕ್ ಮಂಗಳವಾರ ಬಿಡುಗಡೆ ಮಾಡಿದ ‘ಡೂಯಿಂಗ್ ಬ್ಯುಸಿನಸ್ ರಿಪೋರ್ಟ್-2018’ ಹೇಳಿದೆ.

ಹಿಂದಿನ ವರ್ಷ ಭಾರತ 130ನೆ ಸ್ಥಾನದಲ್ಲಿತ್ತು.ವ್ಯವಹಾರದ ಪರಿಸರವನ್ನು ಸುಧಾರಿಸಿದ ಜಾಗತಿಕ ರಾಷ್ಟ್ರಗಳಲ್ಲಿ ಭಾರತ 5ನೇ ಉತ್ತಮ ಸಾಧನೆ ತೋರಿದೆ.

ದೇಶದ ವ್ಯವಹಾರದ ವಾತಾವರಣವನ್ನು ತೀರ್ಮಾನಿಸಲು ವಿಶ್ವ ಬ್ಯಾಂಕ್ ಬಳಸಿದ 10 ಉಪ ವರ್ಗಗಳಲ್ಲಿ ಕೂಡ ಭಾರತ ಉತ್ತಮ ಸ್ಥಾನ ಪಡೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News