ಇಂದಿರಾ ಗಾಂಧಿ 33ನೇ ಪುಣ್ಯತಿಥಿ ಪ್ರಣವ್ ಮುಖರ್ಜಿ, ರಾಹುಲ್ ಗಾಂಧಿ, ಮನಮೋಹನ್ ಸಿಂಗ್‌ರಿಂದ ಪುಷ್ಪ ನಮನ

Update: 2017-10-31 18:11 GMT

ಹೊಸದಿಲ್ಲಿ, ಅ. 31: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 33ನೇ ಪುಣ್ಯತಿಥಿ ದಿನವಾದ ಮಂಗಳವಾರ ಇಲ್ಲಿನ ಶಕ್ತಿ ಸ್ಥಳದಲ್ಲಿ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗೌರವ ಸಲ್ಲಿಸಿದರು.

ಇಲ್ಲಿನ ಶಕ್ತಿಸ್ಥಳದಲ್ಲಿರುವ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಸಮಾಧಿಗೆ ಅವರು ಪುಷ್ಪ ನಮನ ಸಲ್ಲಿಸಲಾಯಿತು. ಕ್ರಿಯಾಶೀಲ ನಾಯಕಿ, ಭಾರತದ ಮೊದಲ, ಏಕೈಕ ಮಹಿಳಾ ಪ್ರಧಾನಿ ಹಾಗೂ 1999ರ ಸಹಸ್ರಮಾನದ ಮಹಿಳೆ ಇಂದಿರಾ ಗಾಂಧಿ ಅವರಿಗೆ ನಾವು ನಮನ ಸಲ್ಲಿಸುತ್ತಿದ್ದೇವೆ ಎಂದು ಕಾಂಗ್ರೆಸ್ ಸರಣಿ ಟ್ವೀಟ್‌ಗಳಲ್ಲಿ ಹೇಳಿದೆ.

 ಹುತಾತ್ಮರಾಗುವುದರಿಂದ ಯಾವುದೇ ವಿಷಯ ಅಂತ್ಯವಾಗುವುದಿಲ್ಲ, ಅದು ಅಲ್ಲಿಂದಲೇ ಆರಂಭವಾಗುತ್ತದೆ ಎಂಬ ಸಂದೇಶ ಹಾಗೂ ತಮ್ಮ ನಾಯಕಿಯ ಭಾವಚಿತ್ರವನ್ನು ಪಕ್ಷ ಪೋಸ್ಟ್ ಮಾಡಿದೆ.

 ಇಂದಿರಾ ಗಾಂಧಿ ಹಾಗೂ ಭಾರತ, ಭಾರತದ ಜನರ ಬಗೆಗಿದ್ದ ಅವರ ಅಪರಿಮಿತ ಉತ್ಸಾಹವನ್ನು ಕಾಂಗ್ರೆಸ್ ಸ್ಮರಿಸಿದೆ.

ಮೋದಿ ನಮನ:

ಇಂದಿರಾ ಗಾಂಧಿ ಅವರು 33ನೇ ಪುಣ್ಯತಿಥಿ ದಿನವಾದ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಕೂಡ ಗೌರವ ನಮನ ಸಲ್ಲಿಸಿದ್ದಾರೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯ ತಿಥಿಗೆ ಗೌರವ ನಮನ ಎಂದು ಅವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News