ತುಳುನಾಡಿಗೆ ಅನ್ಯಾಯ ಖಂಡಿಸಿ ತುರವೇ ಪ್ರತಿಭಟನೆ

Update: 2017-11-01 07:29 GMT

ಮಂಗಳೂರು, ನ.1: ತುಳುನಾಡಿನ ಅಭಿವೃದ್ಧಿ ಮತ್ತು ತುಳು ಭಾಷೆಯನ್ನು 8ನೆ ಪರಿಚ್ಛೇದಕ್ಕೆ ಸೇರಿಸಲು ಸರಕಾರದ ನಿರ್ಲಕ್ಷವನ್ನು ಖಂಡಿಸಿ ತುಳುನಾಡ ರಕ್ಷಣಾ ವೇದಿಕೆಯ ಕಾರ್ಯಕರ್ತರು ಬುಧವಾರ ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

1956ರ ನ.1 ತುಳುವರ ಪಾಲಿಗೆ ತುಳುನಾಡು ಇಬ್ಭಾಗವಾದ ದಿನ. ಭಾಷಾವಾರು ಪ್ರಾಂತ್ಯದ ಸಂದರ್ಭ ತುಳುನಾಡಿನ ಒಂದು ಭಾಗ್ಯ ಅನ್ಯಾಯವಾಗಿ ಕೇರಳಕ್ಕೆ ಸೇರಿದೆ. ಇದನ್ನು ಮರಳಿ ಕರ್ನಾಟಕಕ್ಕೆ ಸೇರಿಸಲು ಸರಕಾರ ಆಸಕ್ತಿ ವಹಿಸುತ್ತಿಲ್ಲ. ತುಳು ಭಾಷೆಯನ್ನು ಸಂವಿಧಾನದ 8ನೆ ಪರಿಚ್ಛೇದಕ್ಕೂ ಸೇರಿಸಲು ಮುಂದಾಗುತ್ತಿಲ್ಲ ಎಂದು ತುರವೇ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಆರೋಪಿಸಿದರು.

 ಈ ಸಂದರ್ಭ ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ತುರವೇ ಪ್ರಧಾನ ಕಾರ್ಯದರ್ಶಿ ಅಬ್ದುರ್ರಶೀದ್ ಜೆಪ್ಪು, ಅಝರುದ್ದೀನ್, ಜುನೈದ್, ರಮೇಶ್ ಪೂಜಾರಿ, ಜ್ಯೋತಿಕಾ ಜೈನ್. ಹರೀಶ್ ಶೆಟ್ಟಿ, ರೇಶ್ಮಾ, ಕುಮಾರ್, ಶಾರದಾ ಕಡಿಯಾಳಿ, ಸುಭಾಷ್ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News