ಹಾದಿಯಾಗೆ ತಂದೆ ದೈಹಿಕ ಕಿರುಕುಳ ನೀಡಿಲ್ಲ: ಎಸ್ಪಿ
Update: 2017-11-02 19:44 IST
ತಿರುವನಂತಪುರ, ನ. 2: ಹಾದಿಯಾಗೆ ಅವರ ತಂದೆ ಯಾವುದೇ ದೈಹಿಕ ಕಿರುಕುಳ ನೀಡಿಲ್ಲ ಎಂದು ಕೊಟ್ಟಾಯಂ ಪೊಲೀಸ್ ಅಧೀಕ್ಷಕ ಕೇರಳ ಮಹಿಳಾ ಆಯೋಗಕ್ಕೆ ಗುರುವಾರ ಸಲ್ಲಿಸಿದ ವರದಿಯಲ್ಲಿ ಹೇಳಿದ್ದಾರೆ. ಹಾದಿಯಾರ ಪ್ರಸ್ತುತ ಪರಿಸ್ಥಿತಿ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ರಾಜ್ಯ ಮಹಿಳಾ ಆಯೋಗ ಕೊಟ್ಟಾಯಂ ಪೊಲೀಸ್ ಅಧೀಕ್ಷಕರಿಗೆ ನಿರ್ದೇಶಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.
ಅಕ್ಟೋಬರ್ 31ರಂದು ನಡೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಯುವತಿಯ ಅಭಿಪ್ರಾಯ ಮುಖ್ಯ ಎಂದು ಹೇಳಿತ್ತು.
ನವೆಂಬರ್ 27ರಂದು ಹಾದಿಯಾ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಕೂಡ ಸುಪ್ರೀಂ ಕೋರ್ಟ್ ಹಾದಿಯಾ ಅವರ ತಂದೆಗೆ ನಿರ್ದೇಶಿಸಿತ್ತು.