ಅತ್ಯಾಚಾರಕ್ಕೆ ವಿರೋಧಿಸಿದ ವಿಧವೆಯ ಜೀವಂತ ದಹನ

Update: 2017-11-02 14:21 GMT

ಬಡೌನ್, ನ. 2: ಅತ್ಯಾಚಾರ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸಿದ ಕಾರಣಕ್ಕೆ 27 ವರ್ಷದ ವಿಧವೆಯನ್ನು ಆಕೆಯ ಮೈದುನ ಜೀವಂತವಾಗಿ ದಹಿಸಿದ ಘಟನೆ ಇಲ್ಲಿನ ಗ್ರಾಮವೊಂದರಲ್ಲಿ ನಡೆದಿದೆ.

 ಬುಧವಾರ ರಾತ್ರಿ ವಿಧವೆ ನೀಲಂ ಲಬ್‌ಹಾರಿಯಲ್ಲಿರುವ ತನ್ನ ನಿವಾಸದಲ್ಲಿ ಒಂಟಿಯಾಗಿ ಇದ್ದ ಸಂದರ್ಭ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನೀಲಂ ಅವರ ತಂದೆ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಆರೋಪಿ ಜಿತೇಂದ್ರನಿಗಾಗಿ ಶೋಧ ಆರಂಭಿಸಲಾಗಿದೆ. ಭಾರತೀಯ ದಂಡ ಸಂಹಿತೆಗೆ ಸಂಬಂಧಿಸಿದ ವಿವಿಧ ಕಲಂ ಅಡಿಯಲ್ಲಿ ಜೀತೇಂದ್ರನ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News